HomePage_Banner_
HomePage_Banner_
HomePage_Banner_

ಪ್ರವಾದಿ ನಿಂದನೆ-ಕೋಮು ಪ್ರಚೋದನೆ: ಕಠಿಣ ಕ್ರಮಕ್ಕೆ ಆಗ್ರಹಿಸಿ SKSSF ಬೆಳ್ತಂಗಡಿ ವಲಯದಿಂದ ಠಾಣೆಗೆ ದೂರು


ಬೆಳ್ತಂಗಡಿ: ಪ್ರವಾದಿ ನಿಂದನೆ ಮತ್ತು ಕೋಮು ಪ್ರಚೋದಕ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಡಿರುವುದಕ್ಕೆ ಮಧುಗಿರಿ ಮೋದಿ ಯಾನೆ ಅತುಲ್ ಕುಮಾರ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಬೆಳ್ತಂಗಡಿ ವಲಯದ ವತಿಯಿಂದ ಫೆ. 19 ರಂದು ದೂರು ಸಲ್ಲಿಸಲಾಯಿತು.
ಸಬ್‌ಇನ್ಸ್‌ಪೆಕ್ಟರ್ ನಂದ ಕುಮಾರ್ ಬೆಳ್ತಂಗಡಿ ಠಾಣೆಯಲ್ಲಿ ದೂರು ಅರ್ಜಿ ಸ್ವೀಕರಿಸಿದರು.

SKSSF ವಲಯ ಉಪಾಧ್ಯಕ್ಷ ರಝಾಕ್ ಕನ್ನಡಿಕಟ್ಟೆ, ಕಾರ್ಯದರ್ಶಿ ರಿಯಾಝ್ ಫೈಝಿ ಕಕ್ಕಿಂಜೆ, ಕೋಶಾಧಿಕಾರಿ ಹಕೀಂ ಬಂಗೇರಕಟ್ಟೆ, ಸದಸ್ಯರಾದ ಸಿರಾಜ್ ಚಿಲಿಂಬಿ, ಬೆಳ್ತಂಗಡಿ ಜುಮ್ಮಾ ಮಸ್ಜಿದ್ ಖತೀಬ್ ಅಬ್ಬಾಸ್ ಫೈಝಿ ದಿಡುಪೆ, ದಾರುಸ್ಸಲಾಂನ ಫೈಝಲ್ ಇವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.