ಭಾರತೀಯ ಸೈನ್ಯದಲ್ಲಿ ಉದ್ಯೋಗಾವಕಾಶ ಗಗನಕುಸುಮವಲ್ಲ, ಪರಿಶ್ರಮ ಹಾಗೂ ಛಲದ ಸಾಕ್ಷಾತ್ಕಾರ-ಹವ್ಯಾಸ್ ಗೌಡ

ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇದರ ಉದ್ಯೋಗ ಮಾಹಿತಿ ಕೋಶದ ಆಶ್ರಯದಲ್ಲಿ ಫೆ. 19ರಂದು  ರಂದು ” ಭಾರತೀಯ ರಕ್ಷಣಾ ಇಲಾಖೆಯಲ್ಲಿ ಉದ್ಯೋಗಾವಕಾಶ ಗಳು” ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿತ್ತು. ಭಾರತೀಯ ನೌಕಾ ಸೇನೆಯಲ್ಲಿ Sea Executive Assistant ಆಗಿ ಕೆಲಸ ನಿರ್ವಹಿಸುತ್ತಿರುವ ಶ್ರೀ ಹವ್ಯಾಸ್ ಗೌಡ ಚಾರ್ಮಾಡಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಹವ್ಯಾಸ್ ಅವರು ಇಲಾಖೆಯಲ್ಲಿ ಇರುವ ವಿವಿಧ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿ, ಪರೀಕ್ಷೆ ಬೇಕಾದ ಪೂರ್ವ ತಯಾರಿ, ಮಾನದಂಡಗಳು ಹಾಗೂ ವಿವಿಧ ಹಂತದ ಪ್ರಕ್ರಿಯೆ ಗಳು, ಉದ್ಯೋಗಸ್ಥರಿಗೆ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ದೈಹಿಕ ಹಾಗೂ ಮಾನಸಿಕ ಕ್ಷಮತೆ, ಸಾಮಾನ್ಯ ಜ್ಞಾನ, ಸಂವಹನ ಕಲೆ ಹಾಗೂ ಭಾಷಾಜ್ಞಾನ, ಸಾಧಿಸಲೇ ಬೇಕೆಂಬ ಛಲ ಇದ್ದರೆ ಎಂತಹ ಕಠಿಣ ಪರೀಕ್ಷೆ ಗಳಲ್ಲೂ ತೇರ್ಗಡೆ ಆಗಬಹುದು. ವಿದ್ಯಾರ್ಥಿ ಜೀವನದಲ್ಲಿ ವಿಶೇಷ ಸಾಧನೆಗೆ ಅವಕಾಶಗಳು ಇವೆ, ಆದರೆ ಹೆಚ್ಚಿನ ವಿದ್ಯಾರ್ಥಿಗಳು ಕ್ಷಣಿಕ ಕಷ್ಟಗಳಿಗೆ ಅಂಜಿ ದೀರ್ಘ ಕಾಲದ ನೆಮ್ಮದಿ ಕೊಡುವ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಆಯ್ದುಕೊಳ್ಳುವ ಉದ್ಯೋಗ ಜೀವನ ಬದಲಿಸಬಲ್ಲುದು. ಉತ್ತಮ ಜೀವನವನ್ನು ಕಟ್ಟಿಕೊಳ್ಳಲು ಭಾರತೀಯ ಸೈನ್ಯ ಉತ್ತಮ ಅವಕಾಶಗಳನ್ನು ಒದಗಿಸುತ್ತದೆ. ಆದರೆ ವಿದ್ಯಾರ್ಥಿಗಳು ಅವಕಾಶಗಳನ್ನು ಬಳಸಿಕೊಳ್ಳುತ್ತಿಲ್ಲ . ದಕ್ಷಿಣ ಕನ್ನಡ ಉಡುಪಿ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರಬೇಕು ಎನ್ನುವ ಆಶಯ ವ್ಯಕ್ತ ಪಡಿಸಿದರು.

ಸುಮಾರು 180ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.ಪ್ರಾಂಶುಪಾಲರಾದ ಶ್ರೀ ಗಣಪತಿ ಭಟ್ ಕುಳಮರ್ವ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಆದರೆ ಉದ್ಯೋಗ ಮಾಹಿತಿ ಕೋಶದ ಸಂಚಾಲಕಿ ಆದ ಶ್ರೀಮತಿ ಚಿತ್ರಾ ಪಡಿಯಾರ್ ಉಪಸ್ಥಿತರಿದ್ದರು. ತೃತೀಯ ಬಿಬಿಎ ಪದವಿಯ ವಿದ್ಯಾರ್ಥಿನಿಯರಾದ ರಚನಾ, ದೀಕ್ಷಿತ, ಧನ್ಯ ಹಾಗೂ ವಿದ್ಯಾಶ್ರೀ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.