ಸವಣಾಲು ಮಿಲ್ಕ್ ಸೊಸೈಟಿ ಅಧ್ಯಕ್ಷರಾಗಿ ದಿನೇಶ್ ಶೆಟ್ಟಿ: ಉಪಾಧ್ಯಕ್ಷರಾಗಿ ರೀಟಾ ಡಿಸೋಜಾ


ಸವಣಾಲು: ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಸಹಕಾರ ಭಾರತಿ ಬೆಂಬಲಿತರಾದ ದಿನೇಶ್ ಶೆಟ್ಟಿ ಕಂಬಳದಡ್ಡ ಮತ್ತು ಉಪಾಧ್ಯಕ್ಷರಾಗಿ ರೀಟಾ ಡಿಸೋಜಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇದಕ್ಕೂ ಮುನ್ನ ನಿರ್ದೇಶಕರಾಗಿ ಸಹಕಾರ ಭಾರತಿ ಬೆಂಬಲಿತರಾದ ದಯಾನಂದ ರೈ, ಚಂದಪ್ಪ ಶೆಟ್ಟಿ, ಚಂದ್ರಾವತಿ, ಮೃದುಳಾ, ಜಯಂತಿ, ರಮೇಶ್ ಆಚಾರ್ಯ ಮತ್ತು ರಂಜಿತ್ ನಾಯ್ಕ, ಉಳಿದಂತೆ ಕೃಷ್ಣಪ್ಪ ಗೌಡ, ರವಿ ಹೇಡ್ಲೆ, ಹೊನ್ನಪ್ಪ ಹೆಗ್ಡೆ ಮತ್ತು ಸೋಮಪ್ಪ ಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಶಿವಲಿಂಗಯ್ಯ ಅವರು ಚುನಾವಣಾಧಿಕಾರಿಯಾಗಿದ್ದರು. 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.