HomePage_Banner_
HomePage_Banner_
HomePage_Banner_

ಗುರುವಾಯನಕೆರೆ ಉರೂಸ್ ಪ್ರಾರಂಭ ದ್ಸಿಕ್ರ್ ಹಲ್ಕಾ ಮಜ್ಲಿಸ್: ಪ್ರತಿದಿನ ಧಾರ್ಮಿಕ ಉಪನ್ಯಾಸ

ಗುರುವಾಯನಕೆರೆ: ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಮತ್ತು ಜುಮ್ಮಾ ಮಸ್ಜಿದ್ ಗುುುರುವಾಯನಕೆ ಇಲ್ಲಿನ 2020 ನೇ ಸಾಲಿನ ಉರೂಸ್ ಮಹಾಸಂಭ್ರಮಕ್ಕೆ ಫೆ, 14 ರಂದು ಚಾಲನೆ ದೊರೆತಿದೆ.

ಮಧ್ಯಾಹ್ನ ಜುಮಾ ನಮಾಝ್‌ನ ಬಳಿಕ ದರ್ಗಾ ಸಮಿತಿ ಅಧ್ಯಕ್ಷ ಹಾಜಿ ಬಿ.ಎಮ್ ಹಾರಿಸ್ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ತಾ| ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಸಾದಾತ್ ತಂಙಳ್, ಜಮಾಅತ್ ಅಧ್ಯಕ್ಷ ಯಾಕೂಬ್ ಮುಸ್ಲಿಯಾರ್, ಕಾರ್ಯದರ್ಶಿ ಹನೀಫ್, ಕೋಶಾಧಿಕಾರಿ ಜಿ.ಕೆ ಉಮರಬ್ಬ, ಉಪಾಧ್ಯಕ್ಷ ಸುಲೈಮಾನ್, ದರ್ಗಾಸಮಿತಿ ಕಾರ್ಯದರ್ಶಿ ಉಸ್ಮಾನ್ ಬಳಂಜ, ಕೋಶಾಧಿಕಾರಿ ಅಬೂಬಕ್ಕರ್ ಲಾಯಿಲ, ಜೊತೆ ಕಾರ್ಯದರ್ಶಿ ಎಸ್ ಎಂ ಎಸ್ ಶಾಮಿಯಾನ ಮಾಲಿಕ ಅಬ್ದುಲ್ ಲೆತೀಫ್ ಮತ್ತು ಹನೀಫ್ ಸುನ್ನತ್‌ಕೆರೆ, ಪ್ರಮುಖರಾದ ಹಾಜಿ ಉಸ್ಮಾನ್ ಶಾಫಿ, ಹಾಜಿ ಹಸೈನಾರ್ ಶಾಫಿ, ಉಪಾಧ್ಯಕ್ಷ ,ಗುತ್ತಿಗೆದಾ ಅಬ್ದುಲ್ ರಹಿಮಾನ್ ಸುನ್ನತ್ ಕೆರೆ , ಸುನ್ನತ್‌ಕೆರೆ ಮಸ್ಜಿದ್ ಅಧ್ಯಕ್ಷ ಅಶ್ರಫ್, ಮಾಜಿ ಸೈನಿಕ ಮುಹಮ್ಮದ್ ರಫಿ, ಅಯ್ಯೂಬ್ ಗುರುವಾಯನಕೆರೆ, ಜಿ.ಎ ಶೇಖಬ್ಬ, ಅಕ್ಬರಾಲಿ ಬದ್ಯಾರ್, ಮುತ್ತಲಿಬ್, ದರ್ಗಾ ಶರೀಫ್ ಮನೇಜರ್ ಜಿ.ಎಸ್ ಆದಂ ಸಾಹೇಬ್, ಇಬ್ರಾಹಿಂ ಕೋಡಿಸಭೆ, ಯೂಸುಫ್ ಬೆಳ್ತಂಗಡಿ, ಇಸಾಕ್ ಗುರುವಾಯನಕೆರೆ, ಉದ್ಯಮಿ ಮುಹಮ್ಮದ್‌ ಜಿ.ಕೆ, ನಾಸಿರ್  ಬೆಳ್ತಂಗಡಿ, ಬದ್ರುದ್ದೀನ್ ಪರಪ್ಪು‌ಮೊದಲಾದವರು ಉಪಸ್ಥಿತರಿದ್ದರು.

ಅಂದು ರಾತ್ರಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಯ್ಯಿದ್ ಸಾದಾತ್ ತಂಙಳ್ ವಹಿಸಿದ್ದರು. ಉರೂಸ್ ಪ್ರಯುಕ್ತ ನಡೆಯುವ ಧಾರ್ಮಿಕ ಉಪನ್ಯಾಸ ಮಾಲಿಕೆಯ ಉದ್ಘಾಟನೆಯನ್ನು ಸಯ್ಯಿದ್ ಜಅಫರ್ ಸಾದಿಕ್ ತಂಙಳ್ ಕುಂಬೋಳ್ ನೆರವೇರಿಸಿದರು. ಮತಪ್ರವಚನವನ್ನು ಕೆ. ಆದಂ ಅಹ್ಸನಿ ತುರ್ಕಳಿಕೆ ನಡೆಸಿದರು.

ಪ್ರತಿದಿನ ಧಾರ್ಮಿಕ ಪ್ರವಚನ:

ಫೆ. 15 ರಂದು ಅಕ್ರಂ ಅಲಿ ತಂಙಳ್ ದಾರುಸ್ಸಲಾಂ ಬೆಳ್ತಂಗಡಿ ದುಆ ನಡೆಸಿದರು. ಮುಹಮ್ಮದ್ ಹನೀಫ್ ನಿಝಾಮಿ ಪ್ರವಚನ ನೀಡಿದರು.

ಫೆ. 16 ರಂದು ಬೈತುಲ್ ಜಲಾಲಿಯಾ ಕಾಸರಗೋಡು ಹಂಝ ಮಿಸ್ಬಾಹಿ ಓಟೆಪದವು ಪ್ರವಚನ ನೀಡಿದರು.

ಫೆ. 17 ರಂದು ಅಲಾ ಖಾದಿಸಾ ಕಾವಳಕಟ್ಟೆ ಚೇರ್‌ಮೆನ್ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ದುಆ ಆಶೀರ್ವಚನ ನೀಡಿದರೆ, ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಪ್ರವಚನ ನೀಡಿದರು. 

ಉರೂಸ್ ಸಂಭ್ರಮದ ಜೊತೆಗೆ ಅಬ್ದುಶ್ಶುಕೂರ್ ಉಜಿರೆ ಅವರು ದರ್ಗಾಶರೀಫ್ ಗೆ ದರ್ಗಾ ಸನ್ನಿಧಿಗೆ  ಚಾದರ ಅರ್ಪಿಸಿದರು.


ತಾಜುಶ್ಶರೀಅ ಆಲಿಕುಂಞಿ ಉಸ್ತಾದ್ ನೇತೃತ್ವದಲ್ಲಿ ದ್ಸಿಕ್ರ್ ಹಲ್ಕಾ ಮಜ್ಲಿಸ್:

ಫೆ. 17 ರಂದು ರಾತ್ರಿ ಪೊಯ್ಯತ್ತಬೈಲು ಮುದರ್ರಿಸ್ ಶೈಖುನಾ ತಾಜುಶ್ಶರೀಅ ಆಲಿಕುಂಞಿ ಉಸ್ತಾದ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮವಾದ ದ್ಸಿಕ್ರ್ ಮಜ್ಲಿಸ್ ಸಂಪನ್ನಗೊಂಡಿತು. ಸಾದಾತ್ ತಂಙಳ್, ಜಮಾಅತ್ ಮತ್ತು ದರ್ಗಾ ಸಮಿತಿ ಅಧ್ಯಕ್ಷ -ಪದಾಧಿಕಾರಿಗಳು ಭಾಗಿಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.