ಐಕಳ ಕಂಬಳ ಕೆರೆಯಲ್ಲಿ ದಾಖಲೆ ನಿರ್ಮಿಸಿದ ಮಿಜಾರು ಶ್ರೀನಿವಾಸ್ ಗೌಡ

Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಐಕಳ ಕಂಬಳ ಕೆರೆಯಲ್ಲಿ ಇರುವೈಲು ಪಾಣಿಲ ಬಾಡ ಪೂಜಾರಿಯವರ ಕೋಣಗಳನ್ನು 13.42 ಸೆಕೆಂಡಿನಲ್ಲಿ 142 ಮೀಟರ್ ಉದ್ದದ ಕರೆಯಲ್ಲಿ ಕೋಣಗಳನ್ನು ಓಡಿಸಿ ಉಸೇನ್ ಬೋಲ್ಟ್ ದಾಖಲೆಯನ್ನೇ ನುಚ್ಚು ನೂರು ಮಾಡಿದ ಮೂಡುಬಿದಿರೆಯ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಇದೀಗ ದೇಶದ ಕಣ್ಮಣಿಯಾಗಿದ್ದಾರೆ.

ಕಂಬಳದ ಉಸೇನ್ ಬೋಲ್ಟ್ ಎಂದೆನಿಸಿರುವ ಗೌಡರನ್ನು ಸ್ವತಃ ಕೇಂದ್ರ ಕ್ರೀಡಾ ಸಚಿವ ಕಿರಣ್ ರಜಿಜು ಅವರೇ ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರರ ಬಳಿಗೆ ಟ್ರಯಲ್ಸ್‌ಗೆ ಬರಲು ಆಹ್ವಾನಿಸಿದ್ದಾರೆ. ಈಗಾಗಲೇ ರೈಲ್ವೆ ಟಿಕೆಟ್ ಬುಕ್ ಮಾಡಿದ್ದೇವೆ. ಅವರಿಗೆ ದೇಶದ ಪ್ರತಿಷ್ಠಿತ ತರಬೇತುದಾರರಿಂದ ತರಬೇತಿ ಒದಗಿಸಲು ನಾವು ಸಿದ್ಧರಿದ್ದೇವೆ, ಎಂದು ಘೋಷಿಸಿದ್ದಾರೆ. ಪಾದದ ಅಡಿಯಲ್ಲಿ ನೀರು, ಮಣ್ಣು, ಒಂದು ಕೈಯಲ್ಲಿ ಕೋಣದ ಲಗಾಮು. ಇಷ್ಟೆಲ್ಲ ಅಡೆತಡೆಗಳ ನಡುವೆಯೂ ಶ್ರೀನಿವಾಸ ಗೌಡರು ಅದ್ಭುತ ಓಟ ಓಡಿದ್ದಾರೆ. ಇವರಿಗೆ ಸೂಕ್ತ ತರಬೇತಿ ನೀಡಿದರೆ ಭಾರತ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬಹುದು ಎಂದು ಕ್ರೀಡಾ ಸಚಿವರೇ ಲೆಕ್ಕಾಚಾರ ಹಾಕಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.