HomePage_Banner_
HomePage_Banner_
HomePage_Banner_

ಬಸ್ಸಿನಲ್ಲಿ ಪ್ರಯಾಣಿಕೆ ಜೊತೆ ಅಸಭ್ಯ ವರ್ತನೆ ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ವೈರಲ್

  • ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಅಮಾನತು: ಬೆಂಗಳೂರಿನಲ್ಲಿ ಬಂಧನ

ಬೆಳ್ತಂಗಡಿ: ಪುತ್ತೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರೊಂದಿಗೆ ನಿರ್ವಾಹಕ ಅಸಭ್ಯವಾಗಿ ವರ್ತಿಸಿದ ಮತ್ತು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ವಿಡಿಯೋ ತುಣುಕಿನೊಂದಿಗೆ ವೈರಲ್ ಆದ ಮತ್ತು ನೊಂದ ಮಹಿಳೆ ನೀಡಿರುವ ದೂರಿನ ಮೇರೆಗೆ ಬೆಂಗಳೂರು ಸುಬ್ರಹ್ಮಣ್ಯ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ನಿರ್ವಾಹಕ ಇಸುಬಾಲಿ ಎಂಬಾತನನ್ನು ಬಂಧಿಸಿದ ಹಾಗೂ ಇಲಾಖಾ ಮೇಲಧಿಕಾರಿಗಳು ಆತನನ್ನು ಸೇವೆಯಿಂದ ಅಮಾನತುಗೊಳಿಸಿರುವ ಘಟನೆ ವರದಿಯಾಗಿದೆ.
ಪುತ್ತೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ಸಿನಲ್ಲಿ ಫೆ.15ರಂದು ಈ ಘಟನೆ ನಡೆದಿತ್ತು.ಮಹಿಳೆ ಹಾಸನದಲ್ಲಿ ಬಸ್‌ಗೆ ಹತ್ತಿದ್ದರು.ಈ ವೇಳೆ ಟಿಕೆಟ್ ನೀಡುವ ನೆಪದಲ್ಲಿ ಬಸ್‌ನ ನಿರ್ವಾಹಕ ಇಸುಬಾಲಿ ಎಂಬವರು ಮಹಿಳೆಯ ಪಕ್ಕದಲ್ಲಿ ಬಂದು ಕೂತು ಬಳಿಕ ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದರು.ನಿರ್ವಾಹಕನ ಅಸಭ್ಯ ವರ್ತನೆಯನ್ನು ಮಹಿಳೆ ತನ್ನ ಮೊಬೈಲ್‌ನಲ್ಲಿ ಆತನಿಗೆ ತಿಳಿಯದಂತೆ ಸೆರೆ ಹಿಡಿದಿದ್ದರು.ಬಳಿಕದ ಬೆಳವಣಿಗೆಯಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತಲ್ಲದೆ ಘಟನೆ ಕುರಿತು ಬೆಂಗಳೂರು ಸುಬ್ರಹ್ಮಣ್ಯ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ನಿರ್ವಾಹಕ ಇಸುಬಾಲಿಯವರನ್ನು ಬಂಧಿಸಿದ್ದಾರೆ. ಆರೋಪಿ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವುದಾಗಿ ತಿಳಿದು ಬಂದಿದೆ.
ಸೇವೆಯಿಂದ ಅಮಾನತು: ಆರೋಪಿಯ ದೃಷ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಮತ್ತು ಬೆಂಗಳೂರಲ್ಲಿ ಪ್ರಕರಣ ದಾಖಲಾಗಿ ಆರೋಪಿ ಬಂಧನವಾಗುತ್ತಲೇ ಇತ್ತ ಆತನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.ಈ ವಿಚಾರವನ್ನು ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿಗಳು ಖಚಿತಪಡಿಸಿದ್ದಾರೆ.

ಉಜಿರೆಯಲ್ಲೂ ಗೂಸಾ?: ನಿರ್ವಾಹಕ ಅಬುಸಾಲಿ ಪುತ್ತೂರು ಡಿಪೊಗೆ ವರ್ಗಾವಣೆ ಆಗುವ ಮುನ್ನ ಧರ್ಮಸ್ಥಳ ಡಿಪೊದಲ್ಲಿ ನಿರ್ವಾಹಕನಾಗಿದ್ದ ಸಮಯ ಅಲ್ಲಿಯೂ ಮಹಿಳೆಯರಿಗೆ ಕಿರುಕುಳ ನೀಡಿದ್ದ ವಿಚಾರದಲ್ಲಿ ಉಜಿರೆಯಲ್ಲಿ ಹಿಂದೂ ಸಂಘಟನೆಯವರು ಹಲ್ಲೆ ನಡೆಸಿ ಬುದ್ದಿವಾದ ಹೇಳಿದ್ದರು.ಈ ಕುರಿತು ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು ಎಂದು ಇದೀಗ ವ್ಯಾಪಕವಾಗಿ ಪ್ರಚಾರವಾಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.