ಫೆ. 22; ವೇಣೂರಿನಲ್ಲಿ ಯುವಸೇವಾ ಸಂಗಮ ಉದ್ಘಾಟನೆ

ಬೆಳ್ತಂಗಡಿ: ಯುವಸೇವಾ ಸಂಗಮ ವೇಣೂರು ಇದರ ಉದ್ಘಾಟನೆ ಪ್ರಯುಕ್ತ ಪೆ. 22 ರಂದು ವೇಣೂರು ವಿದ್ಯೋದಯ ಹಿ. ಪ್ರಾ ಶಾಲೆ ವಠಾರದಲ್ಲಿ ತಾಲೂಕು ಮಟ್ಟದ ಅಮೆಚೂರ್ ಕಬಡ್ಡಿ ಎಸೋಸಿಯೇಶನ್‌ನ ತಾಲೂಕು ಚಾಂಪ್ಯನ್‌ಶಿಪ್ ಪ್ರೋ ಮಾದರಿಯ ಮ್ಯಾಟ್ ಕಬಡ್ಡಿ ಪಂದ್ಯಾಟ, 65 ಕೆ.ಜಿ ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಲಿದೆ ಎಂದು ತಾ| ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ರಂಜನ್ ಜಿ ಗೌಡ ಮತ್ತು ಯುವಸೇವಾ ಸಂಗಮ ವೇಣೂರು ಇದರ ಅಧ್ಯಕ್ಷ ವಿಜಯ ಗೌಡ ವೇಣೂರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತಾಲೂಕು ಚಾಂಪ್ಯನ್‌ಶಿಪ್ ಸಂಜೆ ಉದ್ಘಾಟನೆಗೊಂಡು ರಾತ್ರಿ 8 ರ ವರೆಗೆ ನಡೆಯಲಿದೆ. ಬಳಿಕ ಯುವಸೇವಾ ಸಂಗಮ ಇದರ ಉದ್ಘಾಟನೆ, ಸಾಧಕರಿಗೆ ಸನ್ಮಾನ ಮತ್ತು ಮುಕ್ತ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ವಿವರ ನೀಡಿದರು.
ಎರಡೂ ಸಭೆಗಳಲ್ಲಿ ಗಣ್ಯರಾದ ಉಸ್ತುವಾರಿ ಸಚಿವರು, ಸಂಸದರು, ವಿಧಾನ ಪರಿಷತ್ತು ಶಾಸಕರುಗಳು, ಮಾಜಿ ಶಾಸಕರುಗಳು, ವಿವಿಧ ಸ್ಥರದ ಜನಪ್ರತಿನಿಧಿಗಳು, ಅನೇಕ ಮಂದಿ ಉದ್ಯಮಿಗಳು, ವಿವಿಧ ಕ್ಷೇತ್ರದ ಗಣ್ಯರುಗಳು ಭಾಗವಹಿಸಲಿದ್ದಾರೆ ಎಂದು ವಿವಿರಣೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಬಡ್ಡಿ ಅಸೋಸಿಯೇಶನ್ ಪದಾಧಿಕಾರಿಗಳಾದ ಪೀತಾಂಬರ ಹೇರಾಜೆ, ರಾಜಶೇಖರ ಶೆಟ್ಟಿ ಮಡಂತ್ಯಾರು, ಭರತ್ ಕುಮಾರ್ ಬಂಗಾಡಿ, ಅಬ್ದುಲ್ ರಹಿಮಾನ್ ಪಡ್ಪು, ಜಯರಾಮ ಬಂಗೇರ ಹೇರಾಜೆ, ಪ್ರಭಾಕರ ಹೆಗ್ಡೆ ಹಟ್ಟಾಜೆಗುತ್ತು, ತಾಲೂಕು ಕಬಡ್ಡಿ ತೀರ್ಪುಗಾರರ ಮಂಡಳಿ ಅಧ್ಯಕ್ಷ ಜಯರಾಜ್ ಜೈನ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.