HomePage_Banner_
HomePage_Banner_
HomePage_Banner_

ಫೆ. 16: ರಾತ್ರಿ ಕಾಜೂರು ಉರೂಸ್ ಸಮಾರೋಪ

ಕಾಜೂರು: ಸುಮಾರು ೮೦೦ ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ನಾಡಿನ ಸರ್ವಧರ್ಮೀಯರ ಸೌಹಾರ್ದ ಕೇಂದ್ರ ಕಾಜೂರು ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್‌ನಲ್ಲಿ ಈ ವರ್ಷದ ಉರೂಸ್ ಸಂಭ್ರಮದ ಸಮಾರೋಪ ಫೆ. ೧೬ ರಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಅವರ ಮುಖ್ಯಪ್ರಭಾಷಣದೊಂದಿಗೆ ನಡೆಯಲಿದೆ.


ಸಂಜೆ ೩ ಗಂಟೆಗೆ ಸರ್ವಧರ್ಮೀಯರ ಸೌಹಾರ್ದ ಸಂಗಮ ನಡೆಯಲಿದ್ದು, ಕಾಜೂರು ಗೌರವಾಧ್ಯಕ್ಷ ಕುಂಬೋಳ್ ತಂಙಳ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಯೇನಪೊಯ ಅಬ್ದುಲ್ಲಕುಂಞಿ, ಎಂ.ಕೆ.ಎಂ ಶಾಫಿ ಸಅದಿ, ಡಾ. ಅಬ್ದುಲ್ ರಶೀದ್ ಝೈನಿ, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ವಕ್ಫ್ ಸಚಿವ ಪ್ರಭು ಚೌಹಾಣ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಉಭಯ ಸದನದ ಶಾಸಕರುಗಳಾದ ಹರೀಶ್ ಪೂಂಜ, ಹರೀಶ್ ಕುಮಾರ್, ಬಿ.ಎಂ ಫಾರೂಕ್, ಝಮೀರ್ ಅಹಮ್ಮದ್, ಯು.ಟಿ ಖಾದರ್ ಮತ್ತು ಐವನ್ ಡಿಸೋಜಾ, ಬಿಬಿಎಂಪಿ ಕಾರ್ಪೋರೇಟರ್ ಮುಜಾಹಿದ್ ಪಾಷಾ, ಮಾಝಿ ಶಾಸಕರಾದ ಮೊದಿನ್ ಬಾವಾ, ವಸಂತ ಬಂಗೇರ, ಪ್ರಭಾಕರ ಬಂಗೇರ ಸೇರಿದಂತೆ ಅನೇಕ ಮಂದಿ ಗಣ್ಯರುಗಳು, ಹಾಲಿ ಮತ್ತು ಮಾಜಿ ಸಚಿವರು ಮತ್ತು ಶಾಸಕರುಗಳು ಭಾಗಿಯಾಗಲಿದ್ದಾರೆ. ರಾತ್ರಿ ಉರೂಸ್ ಸಮಾರೋಪದಲ್ಲಿ ಕಡಲುಂಡಿ ತಂಙಳ್ ದುಆ ಆಶೀರ್ವಚನ ನೀಡಲಿದ್ದಾರೆ. ಕಾವಳಕಟ್ಟೆ ಹಝ್ರತ್ ಸಹಿತ ಪಂಡಿತರುಗಳು, ಉಲಮಾ-ಉಮರಾ ನಾಯಕರುಗಳು ಉಪಸ್ಥಿತರಿರಲಿದ್ದಾರೆ ಎಂದು ಉರೂಸ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.