HomePage_Banner_
HomePage_Banner_
HomePage_Banner_

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮೇಲಂತಬೆಟ್ಟು ಶ್ರೀ ಕೋಡಮಣಿತ್ತಾಯ ದೈವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ರೂ. 2 ಲಕ್ಷ ದೇಣಿಗೆ

ಮೇಲಂತಬೆಟ್ಟು : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವಿರೇಂದ್ರ ಹೆಗ್ಗಡೆಯವರು ಫೆ.೨೪ ರಿಂದ ೨೬ರವರೆಗೆ ನಡೆಯಲಿರುವ ಮೇಲಂತಬೆಟ್ಟು ಶ್ರೀ ಕೊಡಮಣಿತ್ತಾಯ ದೈವಸ್ಥಾನ ಶ್ರೀ ವನದುರ್ಗಾ ದೇವಸ್ಥಾನ ನಲ್ಕೆತ್ಯಾರು ಶ್ರೀ ಬ್ರಹ್ಮಬೈದರ್ಕಳ ಊರ ಗರೋಡಿ ನವೀಕೃತ ದೇಗುಲಗಳ ಪುನರ್ ಪ್ರತಿಷ್ಠ ಬ್ರಹ್ಮಕಲಶೋತ್ಸವಕ್ಕೆ ರೂ.೨ ಲಕ್ಷ ದೇಣಿಗೆ ನೀಡಿ ಹರಸಿದ್ದಾರೆ.
ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಯೋಜನಾಧಿಕಾರಿ ಜಯಕರ ಶೆಟ್ಟಿ, ಬೆಳ್ತಂಗಡಿ ಮೇಲ್ವಿಚಾರಕ ರಾಜೇಶ್.ಪಿ ಯವರು ಬ್ರಹ್ಮಕಲಶೋತ್ಸವದ ಅಧ್ಯಕ್ಷ ಯೋಗೀಶ್ ಕುಮಾರ್ ನಡಕ್ಕರವರಿಗೆ ೨ ಲಕ್ಷ ಮೋತ್ತದ ಡಿ.ಡಿ ನೀಡಿದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶೈಲೇಶ್ ಕುಮಾರ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ನಾರಾಯಣ ಪೂಜಾರಿ, ಪ್ರ.ಕಾರ್ಯದರ್ಶಿ ಭಗೀರಥ ಜಿ, ಕಾರ್ಯದರ್ಶಿಗಳಾದ ಮೋಹನ್ ಕುಮಾರ್ ಬಟ್ಯರಡ್ಡ, ಯೋಗೀಶ್ ಕುಲಾಲ್ ಮಂಜಗುಡ್ಡೆ, ವಿಜಯ ರೈ, ಜೊತೆ ಕಾರ್ಯದರ್ಶಿಗಳಾದ ಅಶ್ವಿನಿ ರವಿರಾಜ್, ಸೀತಾ ಮೇಲಂತಬೆಟ್ಟು, ಸಮಿತಿ ಸದಸ್ಯರುಗಳಾದ ಚಂದ್ರರಾಜ ನೂಜೇಲು, ಮೋನಪ್ಪ ಮೇಸ್ತ್ರೀ, ರಾಜೀವ ಸಾಲಿಯಾನ್ ಮುಂಡೂರು, ರಾಜೇಂದ್ರ ಮಾಪಲಾಡಿ, ಹರೀಶ್ ಪಕ್ಕಿದಕಲ, ತುಂಗಪ್ಪ ಕುಲಾಲ್, ತಿಮ್ಮಪ್ಪ ಮೂಲ್ಯ, ಅಣ್ಣು ಪೂಜಾರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.