HomePage_Banner_
HomePage_Banner_
HomePage_Banner_

ಕಾಜೂರು ಉರೂಸ್: ಬೃಹತ್ ದ್ಸಿಕ್ರ್ ಹಲ್ಕಾ ಧಾರ್ಮಿಕ ಕಾರ್ಯಕ್ರಮ

ಮಿತ್ತಬಾಗಿಲು; ಇತಿಹಾಸ ಪ್ರಸಿದ್ಧ ಧಾರ್ಮಿಕ ಸಾಮಾಜಿಕ ಸಮನ್ವಯ ಕೇಂದ್ರ ಕಾಜೂರು ದರ್ಗಾ ಶರೀಫ್ ಉರೂಸ್ ನ ಏಳನೇ ದಿನದ ಧಾರ್ಮಿಕ ಅನುಭೂತಿಯ ಕಾರ್ಯಕ್ರಮವಾದ ಬೃಹತ್ ದ್ಸಿಕ್ರ್ ಹಲ್ಕಾ ಫೆ. 13 ರಂದು ನಡೆಯಿತು.

ಸಮಾರಂಭದ ಅಧ್ಯಕ್ಷತೆ ಮತ್ತು ದ್ಸಿಕ್ರ್ ಹಲ್ಕಾದ ನೇತೃತ್ವವನ್ನು ಸಯ್ಯಿದ್ ಕಾಜೂರು ತಂಙಳ್ ವಹಿಸಿದ್ದರು. ಉದ್ಘಾಟನೆ ಯನ್ನು ಅಬೂಬಕ್ಕರ್ ಸಿದ್ದೀಕ್ ತಂಙಳ್ ತೀರ್ಥಹಳ್ಳಿ ನೆರವೇರಿಸಿದರು.

ಸಮಾರಂಭದಲ್ಲಿ ಮುರ ತಂಙಳ್, ವಾದಿ ಇರ್ಫಾನ್ ತಂಙಳ್, ಇಸ್ಮಾಯಿಲ್ ತಂಙಳ್, ಬೆಳಾಲ್ ತಂಙಳ್, ಸಯ್ಯಿದ್ ತುರಾಬ್ ತಂಙಳ್, ಗುಲ್ ರೇಝ್ ಅಹ್ಮದ್ ರಝ್ವಿ ಬೆಳ್ತಂಗಡಿ, ಹಾಫಿಝ್ ಅಲ್ಲಾಮಾ ಮೌಲಾನಾ ನಾಸಿರ್ ಹುಸೈನ್ ರಝ್ವಿ, ಅಬ್ಬೋನು ಮದ್ದಡ್ಕ, ಯು.ಎಸ್ ಅಬೂಬಕ್ಕರ್ ಉಳ್ಳಾಲ, ನಝೀರ್ ಮಠ, ಕಾಜೂರು ಮುದರ್ರಿಸ್ ವಿ.ಎಮ್ ಅಬೂಬಕ್ಕರ್ ಸಖಾಫಿ, ಮುಖ್ಯ ಅತಿಥಿಯಾಗಿದ್ದರು.
ಮಸ್ ಊದ್ ಸ ಅದಿ ಪದ್ಮುಂಜ ನೇತ್ರತ್ವದಲ್ಲಿ ಬುರ್ದಾ ಆಲಾಪನೆ ಪಡೆಯಿತು.

ಈ ಸಮಾರಂಭದಲ್ಲಿ ಉರೂಸ್ ಸಮಿತಿ ಉಪಾಧ್ಯಕ್ಷ ಕೆ‌ ಮುಹಮ್ಮದ್ ಕಿಲ್ಲೂರು, ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್, ಕಾರ್ಯದರ್ಶಿ ಕಾಸಿಂ ಮಲ್ಲಿಗೆಮನೆ, ಕೋಶಾಧಿಕಾರಿ ಕೆ.ಎಮ್‌ ಕಮಾಲ್ ಕಾಜೂರು,
ಪ್ರಮುಖರಾದ ಕೆ.ಯು ಮುಹಮ್ಮದ್, ಬಿ.ಎ ಯೂಸುಫ್ ಶರೀಫ್, ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಕಿಲ್ಲೂರು, ಬದ್ರುದ್ದೀನ್‌ ಕಾಜೂರು, ಅಬ್ದುಲ್‌ ರಹಿಮಾನ್ ಕಟ್ಟೆಚಾವಡಿ, ಉಮರ್ ಸಖಾಫಿ, ಅಬೂಬಕ್ಕರ್ ಮಲ್ಲಿಗೆ, ಕೆ ಶೇಕಬ್ಬ ಕುಕ್ಕಾವು, ಮುಹಮ್ಮದ್ ರಫಿ, ವಿ‌ ಮುಹಮ್ಮದ್, ಮಹಮ್ಮದ್ ಸಖಾಫಿ, ಹೆಚ್.‌ಎನ್ ಹನೀಫ, ಬಿ.‌ಹೆಚ್ ಹಮೀದ್ ಕಿಲ್ಲೂರು, ಮೊದಲಾದವರು ಉಪಸ್ಥಿತರಿದ್ದರು.

ಉರೂಸ್ ಕಮಿಟಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.