ಮೇಲಂತಬೆಟ್ಟು: ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮಕಲಶೋತ್ಸವದ ಚಪ್ಪರ ಮುಹೂರ್ತ

ಮೇಲಂತಬೆಟ್ಟು: ಶ್ರೀ ಕೊಡಮಣಿತ್ತಾಯ ದೈವಸ್ಥಾನ ಶ್ರೀ ವನದುರ್ಗಾ ದೇವಸ್ಥಾನ ನಲ್ಕೆತ್ಯಾರು ಶ್ರೀ ಬ್ರಹ್ಮ ಬೈದರ್ಕಳ ಊರ ಗರೋಡಿ ನವೀಕೃತ ದೇಗುಲಗಳ ಬ್ರಹ್ಮಕಲಶೋತ್ಸವವು ಫೆ.೨೪ ರಿಂದ ಫೆ.೨೬ ರವರೆಗೆ ವಿವಿಧ ವೈದಿಕ , ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಇದರ ಚಪ್ಪರ ಮುಹೂರ್ತ ಕಾರ್ಯಕ್ರಮವು ಇತ್ತೀಚೆಗೆ ಜರುಗಿತು.
ಪುಂಜಾಲಕಟ್ಟೆ ಉದ್ಯಮಿ ದುರ್ಗಾ ಫರ್ನಿಚರ್‍ಸ್‌ನ ಮಾಲಕ ಉಮೇಶ್ ಶೆಟ್ಟಿ ಚಪ್ಪರ ಮುಹೂರ್ತವನ್ನು ನೆರವೇರಿಸಿ ಕಾರ್ಯಕ್ರಮ ಅದ್ಭುತವಾಗಿ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಯೋಗೀಶ್ ಕುಮಾರ್ ನಡಕ್ಕರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶೈಲೇಶ್ ಕುಮಾರ್, ಪ್ರ.ಕಾರ್ಯದರ್ಶಿ ಭಗೀರಥ.ಜಿ., ಮೋಹನ್ ಮೇಲಂತಬೆಟ್ಟು, ನಾಗಬ್ರಹ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಜನಾರ್ದನಾ ಆಚಾರ್ಯ, ಪ್ರಮುಖರಾದ ಕಿಶೋರ್ ಕುಮಾರ್, ಚಂದ್ರರಾಜ್, ಸಂದೀಪ್ ಅನುಗ್ರಹ, ನಾರಾಯಣ ಪೂಜಾರಿ ಬರಮೇಲು, ರವಿಚಂದ್ರ ಕಲ್ಲಗುಡ್ಡೆ, ಉಮೇಶ್ ಸಪಲ್ಯ ಕಲ್ಲಗುಡ್ಡೆ, ವಿಜಯ ರೈ, ಅಶ್ವಿನಿ ಆರಾಧನಾ, ಸೋಮಪ್ಪ ಪಡಿಬೆಟ್ಟು, ಗಿರೀಶ್ ಕುಮಾರ್, ಪ್ರಮೋದ್ ಕುಮಾರ್ ನೂಜೋಡಿ, ಸಮಿತಿಯವರು ಹಾಗೂ ಊರವರು ಉಪಸ್ಥಿತರಿದ್ದರು.ವೇದಮೂರ್ತಿ ಗೋಪಾಲಕೃಷ್ಣ ತಂತ್ರಿ ಹಾಗೂ ಅರ್ಚಕ ವೃಂದದವರು ವೈದಿಕ ವಿಧಿ-ವಿಧಾನ ನೆರವೇರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.