HomePage_Banner_
HomePage_Banner_
HomePage_Banner_

ಗಾನ ನಮನ: ತ್ಯಾಗರಾಜರ ಹಾಗೂ ಪುರಂದರ ದಾಸರ ಆರಾಧನೆ

Advt_NewsUnder_1

ಗುರುವಾಯನಕೆರೆ: ಶ್ರೀ ಶಾರದಾ ಮಂಟಪದಲ್ಲಿ ಫೆ.೨ರಂದು ಸದ್ಗುರು ತ್ಯಾಗರಾಜರು ಹಾಗೂ ಶ್ರೀ ಪುರಂದರದಾಸರ ಆರಾಧನೆಯು ವಿಜೃಂಭಣೆಯಿಂದ ಜರುಗಿತು. ವಿದುಷಿ ಕೆ.ಆರ್. ಶಾಂತಾ ಉಜಿರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಉಂಡೆಮನೆ ಶಂಭು ಶರ್ಮರವರು ಮಾತನಾಡಿ ಸಾಮವೇದದಿಂದ ಸಂಗೀತ ಹುಟ್ಟಿದೆ ಹಾಗೂ ಸಂಗೀತಕ್ಕೆನಾದವು ಮುಖ್ಯ ಎಂದರು. ನಂತರ ಶ್ರುತಿ-ಲಯ ಕ್ಲಾಸಿಕಲ್ಸ್‌ನ ಎಲ್ಲಾ ಶಾಖೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮವು ನಡೆಯಿತು. ಕೃಷ್ಣವೇಣಿ ಹರಿದಾಸ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಾದ ಮಂಗಳಾ.ಕೆ ಸ್ವಾಗತಿಸಿ, ಕು. ಪ್ರಕೃತಿ ಧನ್ಯವಾದವಿತ್ತರು. ಕು. ಭಾರ್ಗವಿ, ಕು.ಕೀರ್ತನ, ಕು.ಕೃಪಾಶ್ರೀ ಹಾಗೂ ಕು. ಸುಷಿರ.ಕೆ ಇವರು ಕಾರ್ಯಕ್ರಮದಲ್ಲಿ ಸಹಕರಿಸಿದರು. ಪಕ್ಕವಾದ್ಯದಲ್ಲಿ ವಿದುಷಿ ಕೆ.ಆರ್. ಶಾಂತಾ, ಶ್ರೀಪ್ರಿಯಾ ಪರಕ್ಕಜೆ, ವಿದ್ವಾನ್ ವಸಂತ ಕೃಷ್ಣ ಕಾಂಚನ, ಬಾಲಸುಬ್ರಹ್ಮಣ್ಯ ಮಂಗಳೂರು ಹಾಗೂ ಗೌರಿಪ್ರಸಾದ್ ಗುರುವಾಯನಕೆರೆ ಇವರು ಸಹಕರಿಸಿದರು. ನಿವೃತ್ತ ಪ್ರಾಧ್ಯಾಪಕ ಮಧೂರು ಮೋಹನ ಕಲ್ಲೂರಾಯರು ಶ್ಲಾಘಿಸಿ, ಕಾರ್ಯಕ್ರಮಕ್ಕೆ ಆಶೀರ್ವದಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.