ಸಮಾಜದ ಪರಿವರ್ತನೆ ಕುಟುಂಬದಿಂದಲೇ ಆಗಲಿ

Advt_NewsUnder_1
Advt_NewsUnder_1
Advt_NewsUnder_1

ಪುಂಜಾಲಕಟ್ಟೆ: ಲಿಂಗ ಪಾತ್ರಗಳು ಮತ್ತು ಸಾಮಾಜೀಕರಣ ಎಂಬ ವಿಷಯದ ಬಗ್ಗೆ ಪುಂಜಾಲಕಟ್ಟೆ ಸ.ಪ್ರ.ದ ಕಾಲೇಜಿನ ಸಮಾಜಶಾಸ್ತ್ರ ವಿಭಾಗದಿಂದ ವಿಶೇಷೋಪನ್ಯಾಸ ನಡೆಯಿತು.
ಲಿಂಗಪಾತ್ರಗಳಿಗೆ ಸಂಬಂಧಿಸಿ ಮಹಿಳೆಯರು ಮತ್ತು ಪುರುಷರ ಪಾತ್ರಗಳು ಹುಟ್ಟಿನಿಂದ ಬರುವಂತದ್ದಲ್ಲ. ಅದು ಸಾಮಾಜಿಕರಣದ ಮೂಲಕ ಕಲಿಯುವಂತದ್ದು. ಕುಟುಂಬದಲ್ಲಿ ಯಾವ ರೀತಿಯ ಅವಕಾಶಗಳು ಸಿಗುತ್ತದಯೋ ಅದಕ್ಕೆ ಸರಿಯಾಗಿ ಮಹಿಳೆಯರು ಮತ್ತು ಪುರುಷರು ಪಾತ್ರ ನಿರ್ವಹಿಸುತ್ತಾರೆ ಎಂದು ಸೇ.ಹಾರ್ಟ್ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಪ್ರಕಾಶ್ ಕ್ರಮಧಾರಿ ಹೇಳಿದರು.
ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕಿ ಸುಪ್ರೀತಾ.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಐ.ಕ್ಯೂ.ಎ.ಸಿ.ಯ ಸಂಯೋಜಕರು ಪ್ರೊ.ರವಿಶಂಕರ್ ಅಧ್ಯಕ್ಷತೆ ವಹಿಸಿದ್ದರು. ಲೋಲಾಕ್ಷಿ ಸ್ವಾಗತಿಸಿದರು. ರಂಜಿತ ಪ್ರಾರ್ಥಿಸಿದರು. ಪವಿತ್ರ ನಿರೂಪಿಸಿ, ನಿರೀಕ್ಷಾ ವಂದಿಸಿದರು. ಉಪನ್ಯಾಸಕರಾದ ಪ್ರೊ.ಶೇಖರ್, ಪ್ರೊ.ಚಿತ್ರಾ ಪಡಿಯಾರ್, ಪ್ರೊ.ಕುಮಾರ್, ಡಾ.ಕೃಷ್ಣಾನಂದ ಎಂ.ಪಿ., ಸುಜಿತ್, ಜನಾರ್ಧನ್, ಅಶ್ವಿನಿ,ಒಲಿಂಡಾ ಗೊನ್ಸಾಲ್ವಿಸ್,ರೀಟಾ ಡಿ’ಸೋಜಾ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.