ವೇಣೂರು ಕ್ರಿಸ್ತರಾಜ ದೇವಾಲಯ ಉಚಿತ ಆರೋಗ್ಯ ಶಿಬಿರ

ವೇಣೂರು: ಸ್ತ್ರೀ ಸಂಘಟನೆ ಎಸ್.ವಿ.ಪಿ.ಸಿ, ಭಾರತೀಯ ಕೆಥೋಲಿಕ್ ಯುವ ಸಂಚಲನ (ಐಸಿವೈಎಂ), ಕ್ರಿಸ್ತರಾಜ ದೇವಾಲಯ ವೇಣೂರು ಇದರ ನೇತೃತ್ವದಲ್ಲಿ ಉಚಿತ ಆರೋಗ್ಯ ಶಿಬಿರವು ವೇಣೂರು ಕ್ರಿಸ್ತರಾಜ ದೇವಾಲಯದ ಫಾ| ಪೀಟರ್ ಅರನ್ಹಾರವರ ಅಧ್ಯಕ್ಷತೆಯಲ್ಲಿ ವೇಣೂರು ಚರ್ಚ್ ಸಭಾಂಗಣದಲ್ಲಿ ನಡೆಯಿತು.
ಮಿತ್ತೂರಿನ ಖ್ಯಾತ ವೈದ್ಯ ಡಾ| ಸುಬ್ರಹ್ಮಣ್ಯ ಭಟ್ ಸುಮವನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ್ತ ಮಾತನಾಡಿ, ಡಾ. ಸುಬ್ರಹ್ಮಣ್ಯ ಭಟ್‌ರವರ ಸುಜೋಕು ವಿಧಾನವು ಅತ್ಯಂತ ಮಹತ್ವವುಳ್ಳದ್ದಾಗಿದ್ದು, ಯಾವುದೇ ಚಿಕಿತ್ಸಾ ವೆಚ್ಚವನ್ನು ತೆಗೆದುಕೊಳ್ಳದೇ ಉಚಿತ ಸೇವೆ ನೀಡುವ ಅವರ ಸಮಾಜ ಸೇವಾ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ೧೦೦ ಕ್ಕಿಂತಲೂ ಹೆಚ್ಚಿನ ಜನರು ಶಿಬಿರದಲ್ಲಿ ಪಾಲ್ಗೊಂಡು ಚಿಕಿತ್ಸೆ ಪಡೆದುಕೊಂಡರು. ವೇದಿಕೆಯಲ್ಲಿ ವೇಣೂರು ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಡೆನಿಸ್ ಸಿಕ್ವೇರಾ, ಎಸ್.ವಿ.ಪಿ.ಎಸ್. ಅಧ್ಯಕ್ಷ ಸಿರಿ ಪಾಸ್, ಸ್ತ್ರೀ ಸಂಘಟನೆ ಅಧ್ಯಕ್ಷೆ ವಿಲ್ಮಾ ಕ್ರಾಸ್ತಾ, ಐಸಿವೈಎಂ ಅಧ್ಯಕ್ಷೆ ಕುಮಾರಿ ಸಿನೆಟ್ ಮೊರಾಸ್, ಜೆತ್ರುಡ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು. ವಿಲ್ಸನ್ ಡಿಸೋಜಾ ಸ್ವಾಗತಿಸಿ, ಸುಮಿತಾ ಮೋಂತೆರೋ ವಂದಿಸಿದರು. ರೇಶ್ಮಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.