ಕಲಾಸಿಂಧು ಸಾಂಸ್ಕೃತಿಕ ಸಂಘದಿಂದ ಅಧ್ಯಯನ ಪ್ರವಾಸ

Advt_NewsUnder_1
Advt_NewsUnder_1
Advt_NewsUnder_1

ಉಜಿರೆ:-ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ(ಸಿ.ಬಿ.ಎಸ್.ಇ.)ಉಜಿರೆ, ಇಲ್ಲಿಯ ಸಾಂಸ್ಕೃತಿಕ ಸಂಘ ‘ಕಲಾಸಿಂಧು’ ಇದರ ವಿದ್ಯಾರ್ಥಿಗಳು ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜೂಷಾ ವಸ್ತುಸಂಗ್ರಹಾಲಯಕ್ಕೆ ಅಧ್ಯಯನ ಪ್ರವಾಸ ಕೈಗೊಂಡರು. ವಸ್ತುಸಂಗ್ರಹಾಲಯದಲ್ಲಿ ಹಲವಾರು ಹಳೆಯ ಕಾಲದ ವಸ್ತುಗಳನ್ನು ವೀಕ್ಷಿಸಿದ ವಿದ್ಯಾರ್ಥಿಗಳು ಅದರ ಬಗ್ಗೆ ತಿಳಿದುಕೊಂಡರು. ನಂತರ ಧರ್ಮಸ್ಥಳದ  ಹೇಮಾವತಿ ಹೆಗ್ಗಡೆಯವರನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು, ವಿದ್ಯಾರ್ಥಿಗಳು ನಾಟಕ, ಕಥೆ, ಕಾದಂಬರಿಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಬೇಕು. ಕನ್ನಡ ಭಾಷೆಯನ್ನು ಚೆನ್ನಾಗಿ ಕಲಿಯಬೇಕು. ಕನ್ನಡ ದಿನಪತ್ರಿಕೆಗಳು,ವಾರ ಪತ್ರಿಕೆಗಳು, ಮತ್ತು ಮಾಸ ಪತ್ರಿಕೆಗಳನ್ನು ಹೆಚ್ಚು ಹೆಚ್ಚು ಓದಿ ಜ್ಞಾನ ವೃದ್ಧಿಸಿಕೊಳ್ಳಬೇಕೆಂದು ತಿಳಿಸಿದರು ಮತ್ತು ಕಲಾಸಿಂಧು ಸಾಂಸ್ಕೃತಿಕ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಸಂಘದ ಸಂಯೋಜಕ ಶಿಕ್ಷಕರಾದ ಶ್ರೀಮತಿ ಸುಮಾ ಶ್ರೀನಾಥ್ ಮತ್ತು ಹರೀಶ್ ಬಳಂಜ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.