ಪ್ರಯೋಗಾಲಯಗಳಲ್ಲಿ ಸುರಕ್ಷಾ ಕ್ರಮಗಳು ಅತೀ ಅವಶ್ಯಕ : ಜಗದೀಶ ಭಟ್

ಉಜಿರೆ: ಪ್ರಯೋಗಾಲಯಗಳಲ್ಲಿ ಅದರಲ್ಲೂ ರಸಾಯನಶಾಸ್ತ್ರ ಪ್ರಯೋಗಾಲಯದಲ್ಲಿ ಸುರಕ್ಷತಾ ಮಾರ್ಗಗಳನ್ನು ವಿದ್ಯಾರ್ಥಿಗಳಿಗೆ ತಿಳಿಹೇಳುವುದು ಅತೀ ಅವಶ್ಯಕ ಎಂದು ಮಂಗಳೂರಿನ ಸೊಲಾರ ಫಾರ್ಮಾಸುಟಿಕಲ್ ಕಂಪೆನಿಯ ಪರಿಸರ ಆರೋಗ್ಯ ಮತ್ತು ಸುರಕ್ಷತಾ ವಿಭಾಗದ ಮುಖ್ಯಸ್ಥರಾದ ಜಗದೀಶ ಭಟ್ ಅಭಿಪ್ರಾಯಪಟ್ಟರು.
ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ರಸಾಯನಶಾಸ್ತ್ರ ವಿಭಾಗವು ಪ್ರಥಮ ಬಿ.ಎಸ್ .ಸಿ . ವಿದ್ಯಾರ್ಥಿಗಳಿಗೆ ಆಯೋಜಿಸಿದ ‘ಕೆಮಿಕಲ್ ಸೇಫ್ಟಿ – ಸೇಫ್ ಕೆಮಿಸ್ಟ್ರಿ ‘ ಮಾಹಿತಿ ಮತ್ತು ಪ್ರಾತ್ಯಕ್ಷಿಕೆಯ ಕಾರ್ಯಕ್ರಮದಲ್ಲಿ ತರಬೇತಿ ನೀಡಿದರು.
ರಸಾಯನಶಾಸ್ತ್ರ ವಿಭಾಗದ ಮುಖಸ್ಥ ಡಾ. ವಿಶ್ವನಾಥ ಪಿ. ಇವರು ಅಧ್ಯಕ್ಷತೆ ವಹಿಸಿದ್ದರು. ವಿಭಾಗದ ಉಪನ್ಯಾಸಕ ಡಾ. ರಾಜೇಶ ಹೆಗಡೆ ಸಂಯೋಜಿಸಿದ ಈ ಕಾರ್ಯಕ್ರಮದಲ್ಲಿ ವಿಭಾಗದ ಉಪನ್ಯಾಸಕರಾದ ನಂದಾಕುಮಾರಿ ಕೆ. ಪಿ., ದಿವ್ಯ, ಸಂಗೀತ, ಗಾನವಿ ಡಿ. ಮತ್ತು ಡಾ. ನಾರಾಯಣ ಹೆಬ್ಬಾರ್ ಸಹಕಾರ ನೀಡಿದರು. ಪ್ರಥಮ ಬಿ.ಎಸ್.ಸಿ.ಯ ವೇದಶ್ರೀ ಸ್ವಾಗತಿಸಿ, ಶ್ರೀನಯನಾ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಧ್ಯಾ ಎಮ್ . ಅತಿಥಿಯನ್ನು ಪರಿಚಯಿಸಿ, ದೀಪಾ ಬಿ. ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.