HomePage_Banner_
HomePage_Banner_
HomePage_Banner_

ಶೇಷಗಿರಿ : ಕೊಜಪ್ಪಾಡಿ ನಾಗ ಬ್ರಹ್ಮ ಸನ್ನಿಧಿಯಲ್ಲಿ 11 ನೇ ವಾರ್ಷಿಕೋತ್ಸವ

ಕೊಜಪ್ಪಾಡಿ : ಇಲ್ಲಿಯ ಕಳಿಯ ಗ್ರಾಮದ ಶೇಷಗಿರಿ ನಾಗ ಬ್ರಹ್ಮ ಸನ್ನಿಧಿಯಲ್ಲಿ 11 ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಫೆ. 14 ರಂದು ಜರುಗಿತು.

ವೇ.ಮೂ.ಸುಬ್ರಹ್ಮಣ್ಯ ಮುಚ್ಚಿನ್ನಾಯ ನೇತೃತ್ವದಲ್ಲಿ ವೈದಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು. ಬೆಳಿಗ್ಗೆ ನಾಗ ತಂಬಿಲ ಸೇವೆ.ನಾಳ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಮತ್ತು ನಾಗ ಶ್ರೀ ಭಜನಾ ಮಂಡಳಿ ಕೊಜಪ್ಪಾಡಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಆಶ್ಲೇಷಾ ಬಲಿ ಸೇವೆ,ಮಹಾ ಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನ ಸಮರ್ಪಣೆ ನಡೆಯಿತು.ಸೇವಾ ಕರ್ತರಾದ ಶೇಖರ ಶೆಟ್ಟಿ ಮನಸ್ವಿ ಕಡಪ,ರಮೇಶ ಪಿ.ಪಣೆಜಾಲು ಮತ್ತು ಬೆಳ್ತಂಗಡಿ ವಿಘ್ನೇ ಶ ಹೋಟೆಲ್ ಮಾಲಕ ಮಂಜುನಾಥ ಶೆಟ್ಟಿ ಸಹಕರಿಸಿದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ,ಜಿ.ಪಂ  ಸದಸ್ಯೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತ ಎಮ್. ಶೆಟ್ಟಿ,ಕುವೆಟ್ಟು ಪಂ ಅಧ್ಯಕ್ಷ ಅಶೋಕ ಕೋಟ್ಯಾನ್, ಶ್ರೀ ಕ್ಷೇತ್ರ ಧ.ಗ್ರಾ.ಯೋ.ಮೇಲ್ವಿಚಾರಕ ದಿನೇಶ್, ಕುವೆಟ್ಟು ಪಂ.ಮಾ.ಅಧ್ಯಕ್ಷ ಪೂವಪ್ಪ ಭಂಡಾರಿ,ಕಳಿಯ ಪಂಚಾಯತ್  ಸದಸ್ಯೆ ನಳಿನಿ ಶೆಟ್ಟಿ, ಅಂಬಾ ಬಿ.ಅಳ್ವ ನಾಳ,ನಾಳ ದೇವಸ್ಥಾನದ ವ್ಯವಸ್ಥಾಪಕ ಗಿರೀಶ್ ಶೆಟ್ಟಿ , ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ, ಭಜನಾ ಮಂಡಳಿ ಸರ್ವ ಸದಸ್ಯರು ಈ ಸಂದರ್ಭದಲ್ಲಿ ಉದ್ಯಮಿ ಯಶೋಧರ ಶೆಟ್ಟಿ ಕೊರಂಜ ಇವರು ಉಪಸ್ಥಿತರಿದ್ದರು. ಗೌರವ ಅಧ್ಯಕ್ಷ ನಾರಾಯಣ ಭಟ್ ಮುಗುಳಿ,ಅಧ್ಯಕ್ಷ ಅನಂದ ಶೆಟ್ಟಿ ಪಣೆಜಾಲು, ಕಾರ್ಯದರ್ಶಿ ಗೋಪಾಲ ಪೂಜಾರಿ,ಖಜಾಂಚಿ ಜನಾರ್ದನ ಶೆಟ್ಟಿ, ನಾಗಬ್ರಹ್ಮ ಭಜನಾ ಮಂಡಳಿ ಅಧ್ಯಕ್ಷ ಮತ್ತು ಪದಾಧಿಕಾರಿಗಳು, ಶ್ರೀ ನಾಗ ಬ್ರಹ್ಮ ಸೇವಾ ಟ್ರಸ್ಟ್ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು. ಗ್ರಾಮಸ್ಥರು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು. 

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.