ಬಳಂಜ : ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಬಳಂಜ ಯುವಜನ ಮೇಳಕ್ಕೆ ರೂ 50 ಸಾವಿರ ದೇಣಿಗೆ

ಬಳಂಜ: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆಯವರು ಜ-18,19 ರಂದು ಬಳಂಜದಲ್ಲಿ ನಡೆದ ಯುವಜನ ಮೇಳಕ್ಕೆ ರೂ 50 ಸಾವಿರ ಮೊತ್ತದ ಡಿ.ಡಿಯನ್ನು ನೀಡಿದ್ದು ಗುರುವಾಯನಕೆರೆ ಯೋಜನಾ ಕಛೇರಿಯ ಯೋಜನಾಧಿಕಾರಿ ಯಶವಂತ್ ಎಸ್ ರವರು ಜಿಲ್ಲಾ ಯುವಜನ ಮೇಳ ಆಚರಣಾ ಸಮಿತಿ ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್‌ರವರಿಗೆ ಫೆ.13 ರಂದು ಬಳಂಜದಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಅಳದಂಗಡಿ ವಲಯ ಮೇಲ್ವಿಚಾರಕ ದಿನೇಶ್, ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್, ಬಳಂಜ ಶ್ರೀ ಉಮಾಮಹೇಶ್ವರ ಯುವಕ ಮಂಡಲದ ಅಧ್ಯಕ್ಷ ಯೋಗೀಶ್ ಆರ್, ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ, ಬಳಂಜ ಗ್ರಾ.ಪಂ ಸದಸ್ಯರಾದ ಯಶೋಧರ್ ಶೆಟ್ಟಿ, ಹೇಮಂತ್ ಕಟ್ಟೆ, ಯೋಜನೆಯ ಸೇವಾ ಪ್ರತಿನಿಧಿ ಸಂಜೀವ ಆಚಾರ್ಯ, ಶರತ್ ತೆಂಕಕಾರಂದೂರು ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.