HomePage_Banner_
HomePage_Banner_
HomePage_Banner_

ಬೆಳ್ತಂಗಡಿ ನಗರ ಸ್ವಚ್ಚತಾ ಅಭಿಯಾನ ಸಮಾರೋಪ

ಬೆಳ್ತಂಗಡಿ: ಪಟ್ಟಣ ಪಂಚಾಯತ್ ವತಿಯಿಂದ ಬೆಳ್ತಂಗಡಿ ಪಟ್ಟಣವನ್ನು ಸಂಪೂರ್ಣ ಸ್ವಚ್ಛ ನಗರವೆಂದು ಮಾರ್ಪಡಿಸುವ ಕಾರ್ಯ ಕಳೆದ 26 ವಾರಗಳಿಂದ ನಡೆಯುತ್ತಿದ್ದು ಇದರ ಪ್ರಯುಕ್ತ ಫೆ.13ರಂದು ಕುತ್ಯಾರು ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ದೇವಸ್ಥಾನದ ಸುತ್ತಮುತ್ತ ಸ್ವಚ್ಚತಾ ಕಾರ್ಯ ನಡೆಯಿತು.
ಸ್ವಚ್ಚತಾ ಅಭಿಯಾನವು ಮೆಸ್ಕಾಂ ರಸ್ತೆಯಿಂದ ಕುತ್ಯಾರು ದೇವಸ್ಥಾನದವರೆಗೆ ಬೆಳಿಗ್ಗೆ 7.00ರಿಂದ 8.30ರವರೆಗೆ ನಡೆಯಿತು. ಕೊನೆಗೆ ಮುಖ್ಯಾಧಿಕಾರಿ ಸುಧಾಕರ್‌ರವರು ಸಹಕರಿಸಿದ ನಾಗರಿಕರಿಗೆ ಸಂಘ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿದರು. ಈ ಎಲ್ಲರ ಸಹಕಾರದಿಂದ ಮಾತ್ರ ಪಟ್ಟಣವನ್ನು ಸುಂದರವಾಗಿರಿಸಲು ಸಾಧ್ಯ ಎಂದರು.
ಮಂಜುಶ್ರೀ ಸೀನಿಯರ್ ಚೆಂಬರ್‌ನ ಮಾಜಿ ಅಧ್ಯಕ್ಷ ಪ್ರಮೋದ್.ಆರ್ ನಾಯಕ್, ಸುದ್ದಿ ಪತ್ರಿಕೆಯ ವ್ಯವಸ್ಥಾಪಕ ಮಂಜುನಾಥ್ ರೈ, ಮಾತನಾಡಿ ಸ್ವಚ್ಚತಾ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರೊಟರಿ ಅಧ್ಯಕ್ಷ ಜಯರಾಮ, ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಶಂಕರ್, ನಿವೃತ್ತ ಡಿಜಿಪಿ ವೆಂಕ್ರಟಮಣ ಭಟ್, ನಿವೃತ್ತ ಪತ್ರಕರ್ತ ಪಿ.ಎಸ್ ಅಶೋಕ್, ನಗರ ಪಂಚಾಯತ್ ಸದಸ್ಯರುಗಳಾದ ಜಯಾನಂದ ಗೌಡ, ಲೋಕೇಶ್, ರಜನಿ ಕುಡ್ವ, ಸ್ವಚ್ಚತಾ ಸೇನಾನಿ ಜಯರಾಮ ಆಚಾರ್ಯ, ನ.ಪಂ ಇಂಜಿನಿಯರ್ ಮಹಾವೀರ ಅರಿಗ, ವೆಂಕಟ್ ಶರ್ಮ, ಲಕ್ಷ್ಮಣ, ವಿಜಯಕುಮಾರ್, ಹಾಗೂ ಪ.ಪಂ ಸಿಬ್ಬಂದಿಗಳು, ನಿವೃತ್ತ ಯೋದ ಪೂವಯ್ಯ, ಅರಣ್ಯಾಧಿಕಾರಿ ರವೀಂದ್ರರವರು ಅರಣ್ಯ ರಕ್ಷಕ ರಾಘವೇಂದ್ರ ಮಟ್ಟಿ, ವಿಜಯಕುಮಾರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.