ವೈದ್ಯಕೀಯ ವಿಜ್ಞಾನ ಸ್ನಾತಕೋತ್ತರ ಪದವಿ ಡಾ| ಪ್ರತ್ಯೂಷಗೆ 6ನೇ ರ್‍ಯಾಂಕ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯವು 2019ರ ಸಾಲಿನಲ್ಲಿ ನಡೆಸಿದ ವೈದ್ಯಕೀಯ ವಿಜ್ಞಾನ ಪರೀಕ್ಷೆಯಲ್ಲಿ ಮಂಗಳೂರಿನ ಎ.ಜೆ ಮೆಡಿಕಲ್ ಸೈನ್ಸ್ ಮತ್ತು ಸಂಶೋಧನಾ ಕೇಂದ್ರದ ವಿದ್ಯಾರ್ಥಿನಿ ಡಾ| ಪ್ರತ್ಯೂಷ ಡಿ.ಸಿ.ಹೆಚ್ ಪೀಡಿಯಾಟ್ರಿಕ್ಸ್ (ಮಕ್ಕಳ ತಜ್ಞೆ) 6ನೇ ರ್‍ಯಾಂಕ್ ಗಳಿಸಿದ್ದಾರೆ.
ಇವರು ಎ.ಜೆ ಮೆಡಿಕಲ್ ಸೈನ್ಸ್ ಮತ್ತು ಸಂಶೋಧನಾ ಕೇಂದ್ರದಲ್ಲಿ ಮಕ್ಕಳ ಚಿಕಿತ್ಸಾ ತಜ್ಞರಾಗಿ ಪದವಿಯನ್ನು ಪಡೆದುಕೊಂಡಿದ್ದು, ಪ್ರಸ್ತುತ ಬೆಳ್ತಂಗಡಿ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ತಾತ್ಕಲಿಕ ನೆಲೆಯಲ್ಲಿ ಮಕ್ಕಳ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಜೆ ವೇಳೆ ಬೆಳ್ತಂಗಡಿ ನ.ಪಂ ಸಮೀಪದ ಕಟ್ಟಡದಲ್ಲಿರುವ ಧನ್ಯತಾ ಕ್ಲಿನಿಕ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಬೆಳ್ತಂಗಡಿ ಕಸಬಾ ಗ್ರಾಮದ ಕಂಬಳದಡ್ಡ ನಿವಾಸಿ ವಂಜಾರೆ ರಮೇಶ್ ಪೂಜಾರಿ ಮತ್ತು ಶ್ರೀಮತಿ ವಿಜಯಕುಮಾರಿ ದಂಪತಿಯ ಪುತ್ರಿಯಾಗಿದ್ದು, ಇವರ ಸಹೋದರ ಡಾ| ಪ್ರೀತಮ್ ವೈದ್ಯಕೀಯ ವಿಜ್ಞಾನದಲ್ಲಿ ಪ್ರತಿಷ್ಠಿತ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು ಪಡೆದಿರುತ್ತಾರೆ. ಇವರು ಬೆಳ್ತಂಗಡಿ ಪಿಡಬ್ಲೂಡಿ ಸಹಾಯಕ ಇಂಜಿನಿಯರ್ ಗುರುಪ್ರಸಾದ್ ಅವರ ಧರ್ಮಪತ್ನಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.