ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಬ್ರಹ್ಮಕಲಶೋತ್ಸವ ಅಭಿವೃದ್ಧಿಯ ದೃಷ್ಟಿಯಲ್ಲಿ ಕ್ಷೇತ್ರದ ಭಕ್ತನಾಗಿ ಇರುತ್ತೇನೆ – ಹರೀಶ್ ಪೂಂಜ

Advt_NewsUnder_1
Advt_NewsUnder_1
Advt_NewsUnder_1

ಬೆಳಾಲು : ಕ್ಷೇತ್ರ ಅಭಿವೃದ್ಧಿಯ ದೃಷ್ಟಿಯಲ್ಲಿ ಕ್ಷೇತ್ರದ ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನದೊಂದಿಗೆ ಭಕ್ತನಾಗಿ ಇರುತ್ತೇನೆ ಎಂದು ಶಾಸಕ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಹರೀಶ್ ಪೂಂಜ ಹೇಳಿದರು.
ಅವರು ಬೆಳಾಲು ಗ್ರಾಮದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಸಂದರ್ಭ ಫೆ.೧೧ ರಂದು ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಆರಿಕೋಡಿ ಕ್ಷೇತ್ರ ಭಕ್ತರ ಸಹಕಾರದಿಂದ ಉತ್ತಮ ರೀತಿಯ ವ್ಯವಸ್ಥೆಯೊಂದಿಗೆ ಮುನ್ನಡೆಯುತ್ತಿದೆ. ಸಂಪರ್ಕ ರಸ್ತೆಯ ಕಾಮಗಾರಿಗೆ ರಸ್ತೆ ನಿರ್ಮಾಣ ತುರ್ತಾಗಿ ಮಾಡಿಸುವಲ್ಲಿ ಪ್ರಯತ್ನಿಸುತ್ತಿದ್ದೇನೆ ಎಂದರು.
ಇನ್ನೊರ್ವ ಮುಖ್ಯ ಅತಿಥಿ ಉಪ್ಪಿನಂಗಡಿಯ ಉದ್ಯಮಿ ಬಿಳಿಯೂರು ಗುತ್ತು ಧನ್ಯಕುಮಾರ್ ಮಾತನಾಡುತ್ತಾ ಈ ಕ್ಷೇತ್ರದ ಬ್ರಹ್ಮಕಲಶೋತ್ಸವ ಧಾರ್ಮಿಕ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಉತ್ತಮವಾಗಿ ನಡೆಯುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮಾಯಾ ಮಹಾದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹೆಚ್.ಪದ್ಮಗೌಡ ವಹಿಸಿದ್ದರು. ಉಜಿರೆ ಶ್ರೀ .ಧ. ಮಂ. ಕಾಲೇಜಿನ ಉಪನ್ಯಾಸಕ ಮಹಾವೀರ ಜೈನ್ ಧಾರ್ಮಿಕ ಉಪನ್ಯಾಸ ನೀಡಿದರು.
ರಾಜ್ಯ ಯುವ ಒಕ್ಕಲಿಗ ಸಂಘದ ಕಾರ್ಯದರ್ಶಿ ಡಾ| ದೇವಿ ಪ್ರಸಾದ್ ಬೊಳ್ಮ , ತಾ. ಪಂ ಸದಸ್ಯ ಲಕ್ಷ್ಮೀ ನಾರಾಯಣ ಕೊಕ್ಕಡ, ಬೆಳ್ತಂಗಡಿ ನೋಟರಿ ವಕೀಲ ಶ್ರೀನಿವಾಸ ಗೌಡ ಬೆಳಾಲು, ಬೆಳ್ತಂಗಡಿ ವಾಣಿ ಪ. ಪೂ. ಕಾಲೇಜು ಪ್ರಾಂಶುಪಾಲ ಯದುಪತಿ ಗೌಡ, ಉಜಿರೆಯ ಉದ್ಯಮಿ ಶಿವಶಂಕರ್ ಕುಡ್ವ, ಉದ್ಯಮಿ ದೇವಪ್ಪ ಗೌಡ ಸಾಯಿಕೃಪಾ, ಬೆಳಾಲು ಗ್ರಾ. ಪಂ. ಸದಸ್ಯ ಸುರೇಂದ್ರ ಗೌಡ. ಎಸ್, ಬೆಳಾಲು ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕ ದೇವಪ್ಪ ಗೌಡ ನರೆಜ್ಜಾಲು, ಬೆಳಾಲು ಪ್ರಾ. ಕೃ.ಪ.ಸಹಕಾರ ಸಂಘದ ನಿರ್ದೇಶಕ ಎಲ್ಯಣ್ಣ ನಾಯ್ಕ , ರಾಮಣ್ಣ ಗೌಡ ಬದ್ಯಾರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕ್ಷೇತ್ರದ ಆಡಳಿತ ಮೊಕ್ತೇಸರ ಡೊಂಬಯ್ಯ ಗೌಡ, ಧರ್ಮದರ್ಶಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಆರಿಕೋಡಿ ಗಣ್ಯರನ್ನು ಗೌರವಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ದಿನೇಶ್ ದೇಂತ್ಯಾರುಬೊಟ್ಟು ಸ್ವಾಗತಿಸಿ, ಇನ್ನೊರ್ವ ಕಾರ್ಯದರ್ಶಿ ಪ್ರಮೋದ್ ದಿಡುಪೆ ವಂದಿಸಿ, ಶಿಕ್ಷಕ ಮಹೇಶ್ ಪುಳಿತ್ತಡಿ ಕಾರ್ಯಕ್ರಮ ನಿರೂಪಿಸಿದರು.

ಮನುಷ್ಯ ಜೀವನದ ದಾರಿಯಲ್ಲಿ ನಡೆದಾಗ ಮನಸ್ಸು ಶುದ್ಧವಾಗಿರುತ್ತದೆ. ಉತ್ತಮ ಸಂಸ್ಕಾರ, ಆಚಾರ ವಿಚಾರಗಳನ್ನು ಅಳವಡಿಸಿಕೊಂಡು ,ಸಾಮರಸ್ಯದೊಂದಿಗೆ ಒಗ್ಗಟ್ಟಿನಲ್ಲಿ ಮಾಡುವ ಕೆಲಸದಿಂದ ನೆಮ್ಮದಿ ಸಿಗುತ್ತದೆ- ಮಹಾವೀರ ಜೈನ್

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.