ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ

Advt_NewsUnder_1
Advt_NewsUnder_1
Advt_NewsUnder_1

ಬೆಳಾಲು: ಸನಾತನ ಸಂಸ್ಕೃತಿ, ಸಂಸ್ಕಾರ ಭರಿತ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಮೂಲಕ ಭವಿಷ್ಯತ್‌ನಲ್ಲಿ ನೆಮ್ಮದಿ ಜೀವನ ಸಾಧ್ಯ ಎಂದು ಉಡುಪಿಯ ವಕೀಲರು ಕು| ಸಹನಾ ಕುಂದರ್ ಸೂಡ ಹೇಳಿದರು.
ಅವರು ಫೆ.೯ ರಂದು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಪ್ರಥಮ ದಿನದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡುತ್ತಾ ಮಾತನಾಡಿದರು.
ತುಳುನಾಡು ಸಂಸ್ಕಾರ, ಸಂಸ್ಕೃತಿಯನ್ನು ದೈವ ದೇವರುಗಳನ್ನು ಆರಾಧಿಸುವ ಕೇಂದ್ರ ಇಂತಹ ಪುರಾತನ ಸಂಸ್ಕಾರವನ್ನು ಶಿಕ್ಷಣದ ಜೊತೆಗೆ ಮನೆಯಲ್ಲಿ ಮಕ್ಕಳಿಗೆ ಕಲಿಸಬೇಕು. ಬಡತನದ ಮುಖೇತ ಬದುಕಿನ ಪಾಠ ತಿಳಿಯಬಹುದು. ದೇಶೀಯ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ನೆಮ್ಮದಿ ಜೀವನ ಸಾಧಿಸಬಹುದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಉಜಿರೆ ಶ್ರೀ.ಧ.ಮಂ ನ್ಯಾಚೋರೋಪತಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಧರ್ಮೇಂದ್ರ ಕುಮಾರ್ ವಹಿಸಿ ಮಾತನಾಡುತ್ತಾ ಚಾಮುಂಡೇಶ್ವರಿ ಕ್ಷೇತ್ರ ನಂಬಿದ ಭಕ್ತರಿಗೆ ಅಭಯ ನೀಡುವ ಶಕ್ತಿ ಕೇಂದ್ರವಾಗಿದೆ ಇಂತಹ ಕ್ಷೇತ್ರದಲ್ಲಿ ಸೇವೆ ಮಾಡುವ ಅವಕಾಶ ದೊರೆತಿರುವುದು ಪುಣ್ಯದ ಕಾರ್ಯ ಎಂದರು.
ಕ್ಷೇತ್ರದ ಆಡಳಿತ ಮೊಕ್ತೇಸರ ಡೊಂಬಯ್ಯ ಗೌಡ, ಧರ್ಮದರ್ಶಿ ಹರೀಶ್ ಗೌಡ ಆರಿಕೋಡಿ, ವಸಂತ ಗೌಡ ಆರಿಕೋಡಿ ಅತಿಥಿಗಳನ್ನು ಗೌರವಿಸಿದರು.
ಮುಖ್ಯ ಅತಿಥಿಗಳಾಗಿ ಝಿ ಕನ್ನಡ ಕಾಮಿಡಿ ಕಿಲಾಡಿ ಅನೀಶ್, ಉದ್ಯಮಿ ಜಯಣ್ಣ ಗೌಡ ಮೀನಂದೇಲು, ಪ್ರಮೋದ್ ದಿಡುಪೆ, ಕುಶಾಲಪ್ಪ ಗೌಡ ಕೊಯ್ಯೂರು, ಯಕ್ಷಗಾನ ಕಲಾವಿದ ಪುಳಿತ್ತಡಿ ಲಕ್ಷ್ಮಣ ಗೌಡ, ಬೆಳಾಲು ಪ್ರಾ.ಕೃ.ಸ.ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ ರುಕ್ಮಯ್ಯ ಗೌಡ, ಸುದ್ದಿ ಬಿಡುಗಡೆ ಪತ್ರಿಕಾ ಸಹಾಯಕ ವ್ಯವಸ್ಥಾಪಕ ಪಿ ಜಾರಪ್ಪ ಪೂಜಾರಿ, ಶಿಕ್ಷಕ ಎಂ ವಿಜಯ ಕುಮಾರ್ ಕೊಯ್ಯೂರು ಭಾಗವಹಿಸಿದ್ದರು.
ಬೆಳಾಲು ಶ್ರೀ.ಧ.ಮಂ.ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಚೊಕ್ಕಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ವಂದಿಸಿದರು.
ಬಳಿಕ ಮಂಗಳೂರು ಮಡಿಲು ಸಾಂಸ್ಕೃತಿಕ ಟ್ರಸ್ಟ್‌ನಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.