ನಾಳ : ಶ್ರೀ ಕ್ಷೇತ್ರ ಕರಿಂಜೆ ಗೆ ಹಸಿರು ಹೊರೆ ಕಾಣಿಕೆ ಸಮರ್ಪಣೆ

Advt_NewsUnder_1
Advt_NewsUnder_1

ಮೂಡುಬಿದಿರೆ : ಇಲ್ಲಿಯ ಶ್ರೀ ಕ್ಷೇತ್ರದ ಕರಿಂಜೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವತಿಯಿಂದ ಹಸಿರು ಹೊರೆ ಕಾಣಿಕೆಯನ್ನು ಫೆ.9 ರಂದು ಸಮರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ವಸಂತ ಮಜಲು, ರಾಜೇಶ್ ಪೆಂರ್ಬುಡ,ಉಮೇಶ್ ಶೆಟ್ಟಿ ಸಂಬೋಳ್ಯ ನೇತೃತ್ವದಲ್ಲಿ ಅದ್ದೂರಿ ಮೆರವಣಿಗೆಯ ಮೂಲಕ ನಾಳ ಕ್ಷೇತ್ರದ ಹೊರೆ ಕಾಣಿಕೆ ಸಮರ್ಪಣೆ ಮಾಡಿದರು.
ಮಾಣಿಲ ಶ್ರೀ ಧಾಮದ ಪರಮಪೂಜ್ಯ ಶ್ರೀ ಶ್ರೀ ಮೋಹನ ದಾಸ ಪರಮಹಂಸ ಮಹಾ ಸ್ವಾಮೀಜಿಯವರು ಹಾಗೂ ಶ್ರೀ ಕರಿಂಜೆ ಕ್ಷೇತ್ರದ ಪರಮ ಪೂಜ್ಯ ಶ್ರೀ ಮುಕ್ತಾನಂದ ಸ್ವಾಮೀಜಿಯವರು ಮತ್ತು ಸಾವಿರಾರು ಭಕ್ತಾಧಿಗಳಿಂದ ಹಸಿರು ಹೊರೆ ಕಾಣಿಕೆ ಭವ್ಯ ಮೆರವಣಿಗೆ ಮೂಡಬಿದಿರೆಯ ಸ್ವರಾಜ್ಯ ಮೈದಾನದಿಂದ ಶ್ರೀ ಕ್ಷೇತ್ರದ ವರೆಗೆ ನಡೆದ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡುರು. ಶ್ರೀ ಲಕ್ಷ್ಮೀ ಸತ್ಯ ನಾರಾಯಣ ವೀರಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ನೂತನ ಗರ್ಭ ಗುಡಿಯಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠೆ,ಅಷ್ಟಬಂಧ, ಅಷ್ಟೋತ್ತರ ಸಹಸ್ರ, ಬ್ರಹ್ಮ ಕಲಶಾಭಿಷೇಕ, ಅಷ್ಟಪವಿತ್ರ ನಾಗಮಂಡಲದ ಹಾಗೂ ಜಾತ್ರಾ ಮಹೋತ್ಸವ ಫೆ. 9 ರಿಂದ ಫೆ. 19 ರ ತನಕ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.