ಉಜಿರೆಯಲ್ಲಿ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೀಡಾಕೂಟ

Advt_NewsUnder_1
Advt_NewsUnder_1


ಬೆಳ್ತಂಗಡಿ: ತಾಲೂಕು ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸಂಘ, ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಯುವ ವೇದಿಕೆ ಉಜಿರೆ ನೇತೃತ್ವದಲಿ, ಮಹಿಳಾ ವೇದಿಕೆ ಮತ್ತು ಮಹಿಳಾ ಯುವ ವೇದಿಕೆ ಸಹಕಾರದೊಂದಿಗೆ, ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ. ಉಜಿರೆ ಇದರ ಪ್ರಥಮ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಉಜಿರೆ ಎಸ್.ಪಿ. ಆಯಿಲ್‌ಮಿಲ್ ವಠಾರದಲ್ಲಿ ನಡೆದ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೀಡಾಕೂಟ ನಡೆಯಿತು. ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ನಿರ್ದೇಶಕ, ಎಸ್.ಪಿ ಉದ್ಯಮ ಗ್ರೂಪ್‌ನ ಮಾಲಕ ಶಿವಕಾಂತ ಗೌಡ ಉದ್ಘಾಟಿಸಿದರು.
ಆಟದ ಮೈದಾನವನ್ನು ಎ.ಪಿ.ಎಂ.ಸಿ. ಅಧ್ಯಕ್ಷ ಪಿ. ಕೇಶವ ಗೌಡ ಉದ್ಘಾಟಿಸಿದರು. ಉಜಿರೆ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಉಪಾಧ್ಯಕ್ಷ ಸುಂದರ ಗೌಡ ಇಚ್ಚಿಲ ಕ್ರೀಡಾ ಜ್ಯೋತಿ ಬೆಳಗಿದರು. ಅಧ್ಯಕ್ಷತೆಯನ್ನು ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ಕೇರಿಮಾರು ಬಾಲಕೃಷ್ಣ ಗೌಡ ವಹಿಸಿದ್ದರು.
ಸಮಾರಂಭದಲ್ಲಿ ಜಿ.ಪಂ. ಸದಸ್ಯೆ ಸೌಮ್ಯಲತಾ ಜಯಂತ ಗೌಡ, ಇ.ಎನ್.ಟಿ ವೈಧ್ಯೆ ಡಾ| ವಿಜೇತಾ ಎಸ್.ಕೆ., ಪತ್ರಕರ್ತ ಚೈತ್ರೇಶ್ ಇಳಂತಿಲ, ಸಂಘದ ಕಾರ್ಯಾಧ್ಯಕ್ಷ ಎಂ.ತುಂಗಪ್ಪ ಗೌಡ, ಸಹಕಾರಿ ಸಂಘದ ನಿರ್ದೇಶಕ ಎನ್.ಲಕ್ಷ್ಮಣ ಗೌಡ ಬಂಗಾಡಿ, ಸಂಘದ ಕಾರ್ಯದರ್ಶಿ ಬಾಲಕೃಷ್ಣ ಗೌಡ, ಸಂಘದ ಉಜಿರೆ ವಲಯ ಅಧ್ಯಕ್ಷ ಸುರೇಶ್ ಗೌಡ ಕೂಡಿಗೆ, ಶ್ರೀ ಕಾಲ`ರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಅಧ್ಯಕ್ಷ ರಂಜನ್ ಜಿ.ಗೌಡ, ಸಿಇಒ ದಿನೇಶ್ ಗೌಡ, ಸಂಘದ ಉಪಾಧ್ಯಕ್ಷರಾದ ಕೃಷ್ಣಪ್ಪಗೌಡ, ಬಾಬಣ್ಣ ಗೌಡ, ಸುಂದರ ಗೌಡ ಇಚ್ಚಾವು, ಮಹಿಳಾ ಘಟಕದ ಅಧ್ಯಕ್ಷೆ ಅಪರ್ಣಾ ಶಿವಕಾಂತ ಗೌಡ, ಕಾರ್ಯದರ್ಶಿ ಗೀತಾ ಚಿದಾನಂದ ಗೌಡ, ಮಹಿಳಾ ಯುವವೇದಿಕೆಗೆ ಅಧ್ಯಕ್ಷೆ ಅನುಪಮಾ ಸುರೇಶ್ ಗೌಡ, ಕಾರ್ಯದರ್ಶಿ ದಿವ್ಯಾ ವಸಂತ ಗೌಡ ಉಪಸ್ಥಿತರಿದ್ದರು. ಯುವವೇದಿಕೆ ಅಧ್ಯಕ್ಷ ಸುಧಾಕರ ಗೌಡ ಧರ್ಮಸ್ಥಳ ಪ್ರಾಸ್ತಾವಿಸಿ, ಕಾರ್ಯದರ್ಶಿ ಅನಿಲ್ ಗೌಡ ಸ್ವಾಗತಿಸಿದರು. ನಿಡ್ಲೆ ಗ್ರಾ.ಪಂ ಪಿಡಿಒ ಗಾಯತ್ರಿ ದಿನೇಶ್ ಗೌಡ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಕೆದ್ಲ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.