HomePage_Banner_
HomePage_Banner_

ಮೆಟ್ರಿಕ್ ಮೇಳ

ಕನ್ಯಾಡಿ : ಸ.ಉ.ಹಿ.ಪ್ರಾ.ಶಾಲೆ ಕನ್ಯಾಡಿ-II ಗಣಿತ ಸಂಘದ ವತಿಯಿಂದ ಮೆಟ್ರಿಕ್ ಮೇಳವನ್ನು ಜ-18 ರಂದು ಆಯೋಜಿಸಲಾಯಿತು.
ಈ ಮೇಳದಲ್ಲಿ ಶಾಲೆಯ 2 ರಿಂದ 8 ನೇ ತರಗತಿಯ ವಿದ್ಯಾರ್ಥಿಯರನ್ನೊಳಗೊಂಡ ಒಟ್ಟು 70 ಸ್ಟಾಲ್ ಇದ್ದವು. ವಿವಿಧ ರೀತಿಯ ತರಕಾರಿ, ಹಣ್ಣು, ಹೂವು, ಬಗೆಬಗೆಯ ತಿಂಡಿ ತಿನಿಸುಗಳು, ತಂಪು ಪಾನೀಯಗಳನ್ನೊಳಗೊಂಡ ವಿದ್ಯಾರ್ಥಿಗಳ ಸ್ಟಾಲ್‌ಗಳು ತುಂಬಾ ಅಚ್ಚುಕಟ್ಟಾಗಿತ್ತು. ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷರಾದ ಸೂರ್ಯಪ್ರಕಾಶ್ ಎಂ ಇವರು ವಿದ್ಯಾರ್ಥಿಗಳಿಂದ ತರಕಾರಿಯನ್ನು ಕೊಳ್ಳುವ ಮೂಲಕ ಮೇಳವನ್ನು ಉದ್ಘಾಟಿಸಿದರು. ಎಸ್‌ಡಿಎಮ್‌ಸಿ ಸದಸ್ಯರು ಪೋಷಕರು, ಶಾಲಾಭಿಮಾನಿಗಳು, ವಿದ್ಯಾರ್ಥಿಗಳಿಂದ ತರಕಾರಿ ಇನ್ನಿತರೆ ಸಾಮಾನುಗಳನ್ನು ಕೊಳ್ಳುವ ಮೂಲಕ ಅವರನ್ನು ಪ್ರೋತ್ಸಾಹಿಸಿದರು. ವಿದ್ಯಾರ್ಥಿಗಳಲ್ಲಿ ಕೊಂಡಬೆಲೆ, ಮಾರುವಬೆಲೆ, ಲಾಭ ನಷ್ಟಗಳ ಕಲ್ಪನೆ ಮೂಡಿಸಿ ವ್ಯವಹಾರ ಜ್ಞಾನ ಬೆಳೆಸುವ ಉದ್ದೇಶದಿಂದ ಕೊಡಿದ್ದ ಈ ಮೇಳದಲ್ಲಿ ಶಾಲೆಯ ಫ್ಲೇವಿಯಾ ಡಿ’ಸೋಜ ಜೊತೆ ಎಲ್ಲಾ ಶಿಕ್ಷಕರು ಸಕ್ರೀಯವಾಗಿ ಪಾಲ್ಗೊಂಡರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.