ಗುರುವಾಯನಕೆರೆ: ಅಂಗನವಾಡಿ ಮೇಲ್ವಿಚಾರಕಿ ವರ್ಗಾವಣೆ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಇಲ್ಲಿಯ ಗುರುವಾಯನಕೆರೆ ವಲಯದ ಮೇಲ್ವಿಚಾರಕಿ ನಾಗವೇಣಿ ಯವರಿಗೆ ಸನ್ಮಾನ ಕಾರ್ಯಕ್ರಮ ಫೆ.8 ರಂದು ಗುರುವಾಯನಕೆರೆ ಅಂಗನವಾಡಿ ಕೇಂದ್ರದಲ್ಲಿ ಜರುಗಿತು.

ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಮತಿ ನಾಗವೇಣಿ ಯವರು ಕಳೆದ ಸುಮಾರು ಏಳು ವರ್ಷಗಳ ಕಾಲ ಪಡಂಗಡಿ ಕಳಿಯ, ನ್ಯಾಯತರ್ಪು,ಓಡಿಲ್ನಾಳ, ಕುವೆಟ್ಟು, ಪಡಂಗಡಿ,ಮೇಲಂತಬೆಟ್ಟು ಮತ್ತು ಮಾಲಾಡಿ ಗ್ರಾಮದ ಸುಮಾರು 30 ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಪ್ರಸ್ತುತ ಇಂದಬೆಟ್ಟು ವಲಯದ ಮೇಲ್ವಿಚಾರಕಿಯಾಗಿ ವರ್ಗಾವಣೆ ಗೊಂಡಿದ್ದಾರೆ.ಅ ಪ್ರಯುಕ್ತ ಪಡಂಗಡಿ ವಲಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆ ಯವರು ಸನ್ಮಾನಿಸಿ ಬೀಳ್ಕೋಡಿಗೆ ಕಾರ್ಯಕ್ರಮ ಗುರುವಾಯನಕೆರೆ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಪಡಂಗಡಿ ಆರೋಗ್ಯ ಕೇಂದ್ರದ ಕಾರ್ಯಕರ್ತೆ ಪ್ರೀತಿ ಶೆಟ್ಟಿ, ಬ್ರಹ್ಮ ಕುಮಾರಿ ಗೀತಾ, ಕುಮಾರಿ ಪ್ರೇಮ, ಮತ್ತು ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಮುತ್ತಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.ಹಾಗೂ ಆಧ್ಯಾತ್ಮಿಕದ ಬಗ್ಗೆ ಮಾಹಿತಿ ನೀಡಿದರು.ಪ್ರಾರ್ಥನೆ ಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಆಶಾ ಲತಾ ಸ್ವಾಗತಿಸಿದರು.ಪುರಿಯ ಅಂಗನವಾಡಿ ಕೇಂದ್ರ ಕಾರ್ಯಕರ್ತೆ ಮೋಹಿನಿ ಧನ್ಯವಾದವಿತ್ತರು. 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.