ಮಹಾತ್ಮಾ ಗಾಂಧಿ ಪುಣ್ಯ ಸ್ಮರಣೆ, ಸ್ವಚ್ಚತಾ ಆಂದೋಲನ


ಬೆಳ್ತಂಗಡಿ: ನಾವು ದಿನನಿತ್ಯ ಆಹಾರ ಸೇವಿಸುವಂತೆ ನಿತ್ಯ ಸ್ವಚ್ಛತೆಯನ್ನು ಕಾಪಾಡಬೇಕು. ಇದರಿಂದ ನಮ್ಮ ಆರೋಗ್ಯ ವೃದ್ಧಿಯಾಗಿ ಸುಖ ಸಂತೋಷ ಮನೆಮಾಡುತ್ತದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್ಬಿನ ಮಾಜಿ ಅಧ್ಯಕ್ಷ, ನಿವೃತ್ತ ಮೇಜರ್ ಜನರಲ್ ಎಂ.ವಿ. ಭಟ್ ಮುಂಡಾಜೆ ಹೇಳಿದರು.
ಬೆಳ್ತಂಗಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೆಲ್ಲಗುತ್ತು ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ನಡೆದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಅಭಿಪ್ರಾಯವನ್ನು ಹಂಚಿಕೊಂಡರು. ಇದೇ ವೇಳೆ ಮಹಾತ್ಮಾ ಗಾಂಧಿಯವರ ಪುಣ್ಯತಿಥಿಯ ಆಚರಣೆ ಕೂಡ ನಡೆದು ದಿನದ ಸಂದೇಶವನ್ನು ಅವರು ಸಾರಿದರು.
ರೋಟರಿ ಕ್ಲಬ್ ಅಧ್ಯಕ್ಷ ಜಯರಾಮ್ ಸಹಕಾರ ಘೋಷಿಸಿದರು.
ಅಭಿಯಾನದಲ್ಲಿ ಪಟ್ಟಣ ಪಂಚಾಯತ್ ಸದಸ್ಯೆ ಗೌರಿ, ಸತ್ಯಸಾರಮಾನಿ ಸಮಿತಿ ಅಧ್ಯಕ್ಷ ಬಾಬು, ಸ್ಥಳೀಯರಾದ ವಿಶ್ವನಾಥ, ಪ್ರಶಾಂತ, ಶ್ರೀನಿವಾಸ ಇನ್ನಿತರ ಹಲವರು ಭಾಗವಹಿಸಿದ್ದರು.
ಅಭಿಯಾನದ ಯಶಸ್ಸಿನಲ್ಲಿ ಮುಖ್ಯಾಧಿಕಾರಿ ಸುಧಾಕರ, ಇಂಜಿನಿಯರ್ ಮಹಾವೀರ ಆರಿಗ, ಸಮುದಾಯ ಸಂಘಟನಾಧಿಕಾರಿ ವೆಂಕಟರಮಣ ಶರ್ಮ, ಸಿಬ್ಬಂದಿಗಳಾದ ಲಕ್ಷ್ಮೀನಾರಾಯಣ, ಲಕ್ಷ್ಮಣ, ಅಶೋಕ, ಆನಂದ ಇನ್ನಿತರರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.