ಬೃಹತ್ ನೇತ್ರ ಪರೀಕ್ಷೆ- ರಕ್ತ ವರ್ಗೀಕರಣ ಶಿಬಿರ


ಕಲ್ಲೇರಿ: ಬೃಹತ್ ನೇತ್ರ ಪರೀಕ್ಷೆ ಮತ್ತು ರಕ್ತ ವರ್ಗೀಕರಣ ಶಿಬಿರವು  ಕ್ಲಬ್ ಬೆಳ್ತಂಗಡಿ, ರೋಟರಿ ಕ್ಲಬ್ ಉಪ್ಪಿನಂಗಡಿ, ನಿವೃತ್ತ ಸರಕಾರಿ ನೌಕರರ ಸಂಘ ಬೆಳ್ತಂಗಡಿ, ಜಿಲ್ಲಾ ಅಂಧತ್ವ ನಿವಾರಣ ಘಟಕ, ವೆನ್ಲಾಕ್ ಆಸ್ಪತ್ರೆ ಮಂಗಳೂರು, ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರುಗಳ ಸಂಯುಕ್ತಾಶ್ರಯದಲ್ಲಿ, ಕಲ್ಲೇರಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಈ ಶಿಬಿರವನ್ನು ಪಂಚಾಯತ್ ಅಧ್ಯಕ್ಷ ಜಯವಿಕ್ರಮ್ ಉದ್ಘಾಟಿಸಿ ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ಸೇವೆ ಶ್ಲಾಘನೀಯ ಎಂದರು. ಶಿಬಿರದ ಅಧ್ಯಕ್ಷತೆ ವಹಿಸಿದ್ದ ನಿರಂಜನ ಮಾವಂತಬೆಟ್ಟು ಶುಭ ಹಾರೈಸಿದರು. ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಚಂದಪ್ಪ ಮೂಲ್ಯರವರು ಶಿಬಿರಕ್ಕೆ ಅಗತ್ಯ ಸಹಾಯ ನೀಡಿದರು. ಹಿರಿಯ ನೇತ್ರಾಧಿಕಾರಿ ಶಾಂತರಾಜ್ ಮಾಹಿತಿ ಮತ್ತು ಸಲಹೆ ನೀಡಿದರು. ಡಾ ಗೌರಿ ಪೈ ಆನಂದಾಶ್ರಮ ಸೇವಾ ಟ್ರಸ್ಟ್ ವತಿಯಿಂದ 141 ಕನ್ನಡಕಗಳನ್ನು ಶಿಬಿರಾರ್ಥಿಗಳಿಗೆ ಉಚಿತವಾಗಿ ವಿತರಿಸಿದರು. ಅಳದಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶ್ರೀಮತಿ ಸಂಧ್ಯಾ ರವರು  76 ಜನರ ರಕ್ತ ಪರೀಕ್ಷೆ ನಡೆಸಿ ಕೊಟ್ಟರು. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ ಡಯಾನ ಮತ್ತು ಸಿಬ್ಬಂದಿಗಳು ಅಗತ್ಯ ನೆರವು ನೀಡಿದರು. ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಜಯರಾಮ್ ಸ್ವಾಗತಿಸಿ, ಕಲ್ಲೇರಿ ಗ್ರಾಮ ಪಂಚಾಯಿತ್ ಸಹಕರಿಸಿತು, ಸಿ.ಎ ಬ್ಯಾಂಕ್ ಹಾಲು ಉತ್ಪಾದಕರ ಸಹಕಾರ ಸಂಘಗಳ ಪದಾಧಿಕಾರಿಗಳನ್ನು ಅಭಿನಂದಿಸಿ, ನಿವೃತ್ತ ಸರಕಾರಿ ನೌಕರರ ಸಂಘದ ಸೂರಪ್ಪ ಪೂಜಾರಿ ವಂದಿಸಿದರು. ಬೆಳ್ತಂಗಡಿ ರೋಟರಿ ಕ್ಲಬ್‌ನ ಶ್ರೀಕಾಂತ್ ಕಾಮತ್, ಯಶವಂತ್ ಪಟವರ್ಧನ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಶಿಬಿರದಲ್ಲಿ  236ಜನರ ಕಣ್ಣಿನ ಪರೀಕ್ಷೆ ನಡೆಸಿ 141 ಕನ್ನಡಕ ವಿತರಿಸಿ 7 ಜನರಿಗೆ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.