ಚಾರ್ಮಾಡಿ ಪರ್ಲಾಣಿ ಶಾಲೆಯಲ್ಲಿ ಎನ್‌ಎಸ್ಸೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

Advt_NewsUnder_1
Advt_NewsUnder_1

ಚಾರ್ಮಾಡಿ: ಪ್ರಸನ್ನ ಪಾಲಿಟೆಕ್ನಿಕ್ ಲಾಲ ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಚಾರ್ಮಾಡಿಯ ಪರ್ಲಾಣಿ ಸರಕಾರಿ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ ಚಾರ್ಮಾಡಿ ಇದರ ಪ್ರಧಾನ ಅರ್ಚಕ ಶ್ರೀನಿವಾಸ ಉಪಾಧ್ಯಾಯ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಪ್ರಸನ್ನ ಪಾಲಿಟೆಕ್ನಿಕ್ ಉಪಪ್ರಾಂಶುಪಾಲ ಕಿರಣ್ ವಹಿಸಿದ್ದರು.
ಚಾರ್ಮಾಡಿ ಗ್ರಾ. ಪಂ. ಅಧ್ಯಕ್ಷೆ ಶೈಲಜಾ, ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಹೊಸಮಠ, ಪರ್ಲಾಣಿ ಕೃಷಿಕರ ವಲಯದ ಅಧ್ಯಕ್ಷ ಕೃಷ್ಣ ಭಟ್, ಅಣಿಯೂರು, ಕಕ್ಕಿಂಜೆ ಕ್ಲಸ್ಟರ್ ಸಿ.ಅರ್.ಪಿ ಜಯದೇವ ನಾಯಕ್, ಚಾರ್ಮಾಡಿ ಗ್ರಾಮ ಪಂಚಾಯತ್ ಸದಸ್ಯ ಗೋಪಾಲಕೃಷ್ಣ ಕೆರೆಕೋಡಿ, ಸುರೇಶ್ ಗೌಡ ಮಾರಂಗಾಯಿ, ಉಮೇಶ್ ಕುಮಾರ್, ಪರ್ಲಾಣಿ ಶಾಲಾ ಮುಖ್ಯೋಪಾಧ್ಯಾಯಿನಿ ಶಾಂತಿ ಡಿಸೋಜಾ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಪವಿತ್ರಾ, ಉಪಾಧ್ಯಕ್ಷ ಗೋಪಾಲ, ಸದಸ್ಯರಾದ ಡೀಕಯ್ಯ ಗೌಡ, ಶಿಬಿರಾರ್ಥಿ ನಾಯಕ ಹರಿಶ್ಚಂದ್ರ ಹಾಗೂ ಹಿತೇಶ್ ಪ್ರಸಾದ್ ಉಪಸ್ಥಿತರಿದ್ದರು.
ಶಿಬಿರಾಧಿಕಾರಿ ಪ್ರಶಾಂತ್ ಕುಮಾರ್ ಸ್ವಾಗತಿಸಿ, ಸಹಾಯಕ ಶಿಬಿರಾಧಿಕಾರಿ ಆದರ್ಶ್ ಹೆಚ್ ಡಿ ವಂದನಾರ್ಪಣೆಗೈದರು. ನಿರೂಪಣೆಯನ್ನು ಉಪನ್ಯಾಸಕಿ ಆಯಿಷಾ ಕೆ. ಇ ಇವರು ನೆರವೇರಿಸಿದರು. ಉಪನ್ಯಾಸಕಿಯರಾದ ಯಶ್ವಿನಿ ಹಾಗೂ ಸ್ನೇಹಾ ಕಾರ್ಯಕ್ರಮಕ್ಕೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.