ಯಕ್ಷಗಾನ ನಾಟ್ಯ ತರಬೇತಿ

Advt_NewsUnder_1
Advt_NewsUnder_1

ಕಕ್ಕಿಂಜೆ: ಫೆ.2 ರಂದು ಯಕ್ಷಭಾರತಿ ಕನ್ಯಾಡಿ ವತಿಯಿಂದ ಆಸಕ್ತ ವಿದ್ಯಾರ್ಥಿಗಳಿಗೆ ಯಕ್ಷಗಾನ ನಾಟ್ಯ ತರಬೇತಿಯು ಕಳೆಂಜ ಗ್ರಾಮದ ಶಾಲೆತಡ್ಕದ ಸರಕಾರಿ ಉನ್ನತೀಕರಿಸಿದ ಶಾಲೆಯಲ್ಲಿ ಆರಂಭಗೊಂಡಿತು. ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ರಮೇಶ್ ರಾವ್ ಕಾಯಡ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ರತ್ನ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಯಕ್ಷಭಾರತಿ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಸೇವಾಭಾರತಿಯ ಟ್ರಸ್ಟಿ ಕುಸುಮಾಕರ ಗೌಡ, ಗ್ರಾ.ಪಂ ಅಧ್ಯಕ್ಷೆ ಶಾರದ,ನಾಟ್ಯ ಗುರುಗಳಾದ ಗಂಗಾಧರ ಕಾಯರ್ತಡ್ಕ ಉಪಸ್ಥಿತರಿದ್ದರು.
ಶಾಲಾ ಅಧ್ಯಾಪಕಿ ವಿಜೇತ ನಿರೂಪಿಸಿ ಸ್ವಾಗತಿಸಿ,  ಕು.ಅಶ್ವಿನಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.