ಕೊರಂಜ ಶಾಲೆಗೆ ನೀರಿನ ಟ್ಯಾಂಕ್ 3.75 ಲಕ್ಷ ಕಾಮಾಗಾರಿಗೆ ಶಿಲಾನ್ಯಾಸ

Advt_NewsUnder_1
Advt_NewsUnder_1

ಕಳಿಯ : ಇಲ್ಲಿಯ ಗೇರುಕಟ್ಟೆ ಕೊರಂಜ ಶಾಲೆಗೆ ಕುಡಿಯುವ ನೀರಿನ ಟ್ಯಾಂಕ್ ರಚನೆಗೆ ಶಿಲನ್ಯಾಸ ಫೆ.7 ರಂದು  ನಡೆಯಿತು. 

ದಕ್ಷಿಣ ಕನ್ನಡ ಜಿ.ಪಂಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ,ಕುವೆಟ್ಟು ಜಿ ಪಂ ಕ್ಷೇತ್ರದ ಸದಸ್ಯೆ ಮಮತ ಎಮ್.ಶೆಟ್ಟಿ ದೀಪ ಪ್ರಜ್ವಲಿಸುವ ಮೂಲಕ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡುತ್ತಾ, ಕಳೆದ ಕೆಲವು ‌ವರುಷ ಹಿಂದಿನ ಬೇಡಿಕೆಯನ್ನು ಈಡೇರಿಸುವ ಜೊತೆಗೆ ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಪೂರೈಸುತ್ತದೆ. ಜಿಲ್ಲಾ ಪಂಚಾಯತ ವತಿಯಿಂದ 3.75 ಲಕ್ಷ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಉತ್ತಮ ಗುಣಮಟ್ಟದ ಕಾಮಗಾರಿ ಮಾಡುವ ಮೂಲಕ ಶೀಘ್ರದಲ್ಲೇ ನೀರಿನ ಟ್ಯಾಂಕ್ ರಚನೆ ಮಾಡುವಂತೆ ಗುತ್ತಿಗೆ ದಾರರಿಗೆ ತಿಳಿಸಿದರು.
ಕಳಿಯ ಪಂಚಾಯತ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಪಂ. ಸದಸ್ಯರಾದ ಸುದಾಕರ ಮಜಲು, ದಿವಾಕರ ಎಮ್, ಬಿಜೆಪಿ ಪಕ್ಷದ ಪ್ರಮುಖರಾದ ರಾಜೇಶ್ ಪೆಂರ್ಬುಡ, ಗೇರುಕಟ್ಟೆ ಪ್ರೌಢ ಶಾಲಾ ಉಪಾಧ್ಯಕ್ಷ ಪ್ರಕಾಶ್ ಮೇರ್ಲ,ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ರತ್ನಾಕರ ಬಳ್ಳಿದಡ್ಡ ,ಗುತ್ತಿಗೆದಾರ ಗುರು ಪ್ರಸಾದ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಯಾನಂದ ಶೆಟ್ಟಿ,ಉಪಾಧ್ಯಕ್ಷ ಜ್ಯೋತಿ ಚಂದ್ರಶೇಖರ,ಪ್ರಮೋದ್ ಶೆಟ್ಟಿ,ಯಾದವ ಗೌಡ, ಪ್ರವೀಣ ಪೂಜಾರಿ, ಪ್ರೇಮ,ಅಶ್ವಿನಿ,ಜಯಂತಿ,ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಗಿರಿಯಪ್ಪ ಗೌಡ, ನಾಳ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಸೋಮಪ್ಪ ಗೌಡ, ಸ್ಥಳೀಯ ಸತೀಶ್ ಶೆಟ್ಟಿ, ರಂಜನ್ ಎಂ, ಶಾಲಾ ಶಿಕ್ಷಕಿ ಯರಾದ ವನಜ,ಅನುರಾಧ ಬಿ.ಸಿ,ಸಿಬುಲ್ ಪೈಾಸ್,ಪ್ರೇಮ ಲತಾ ಕೆ. ಅಮಿತಾ ಎ.ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಭಾರ ಶಿಕ್ಷಕಿ ಉಷಾ ಪಿ.ಸ್ವಾಗತಿಸಿ ಜಾನಕಿ ಪಟಗಾರ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.