ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಗುವನ್ನು 4 ಗಂಟೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತಲುಪಿಸಿದ ಚಾಲಕ ಹನೀಫ್ ಬಳಂಜ

Advt_NewsUnder_1
Advt_NewsUnder_1

ಹೃದಯದ ಖಾಯಿಲೆಯಿಂದ ಬಳಲುತ್ತಿದ್ದ ಮಗುವನ್ನ ಹೆಚ್ಚಿನ ಚಿಕಿತ್ಸೆಗಾಗಿ ಕೇವಲ ನಾಲ್ಕೂವರೆ ಗಂಟೆಯಲ್ಲಿ ಬೆಂಗಳೂರಿಗೆ ತಲುಪಿಸಿದ ಘಟನೆಗೆ ಕರಾವಳಿ ಇಂದು ಸಾಕ್ಷಿಯಾಯಿತು. ೪೦ ದಿನದ ಮಗುವಿನ ಹೃದಯದ ಶಸ್ತ್ರ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಶರವೇಗದಲ್ಲಿ ಕರೆದೊಯ್ಯಲಾಯಿತು. ರಾಜ್ಯ ರಾಜಧಾನಿ ಬೆಂಗಳೂರಿಗೆ ತೆರಳೋ ರಸ್ತೆಯುದ್ದಕ್ಕೂ ಕಾವಲಾಳುಗಳಂತೆ ನಾಗರಿಕರು, ಸ್ಥಳೀಯ ಆ್ಯಂಬುಲೆನ್ಸ್ ಗಳು ಹಾಗೂ ಪೊಲೀಸ್ ವಾಹನಗಳು ಆ್ಯಂಬುಲೆನ್ಸ್ ಗೆ ಬೆಂಗಾವಲಾಗಿ ಹಾಗೂ ಟ್ರಾಫಿಕ್ ನಿಯಂತ್ರಣದ ಮೂಲಕ ಝೀರೋ ಟ್ರಾಫಿಕ್ ಗೆ ಕೈ ಜೋಡಿಸಿದವು.. ಮಧ್ಯಾಹ್ನ ೧೨ ಗಂಟೆಗೆ ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ಹೊರಟ ಆ್ಯಂಬುಲೆನ್ಸ್ ಸಂಜೆ ನಾಲ್ಕೂವರೆ ಗಂಟೆಗೆ ಬೆಂಗಳೂರಿನ ಜಯದೇವ ಆಸ್ಪತ್ರೆ ತಲುಪಿತು. ಬಿಸಿ ರೋಡ್ , ಉಪ್ಪಿನಂಗಡಿ, ನೆಲ್ಯಾಡಿ, ಸಕಲೇಶಪುರ, ಹಾಸನ ಮರ‍್ಗವಾಗಿ ಚಿರತೆ ವೇಗದಲ್ಲಿ ಸಂಚರಿಸಿದ ಆ್ಯಂಬುಲೆನ್ಸ್ ನ ಚಾಲಕ ಹನೀಫ್  ಬಳಂಜ ಅವರನ್ನ ಬೆಂಗಳೂರಿನಲ್ಲಿ ಅಭಿನಂದಿಸಲಾಯಿತು. ನೆರೆದಿದ್ದವವರು ಚಾಲಕ ಹನೀಫ್ ಅವರ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿ ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದು ಕಂಡುಬಂತು. ಅಲ್ಲದೇ ಜಯದೇವ ಆಸ್ಪತ್ರೆ ತಲುಪುತ್ತಿದ್ದಂತೆ ಮಗುವನ್ನು ತಕ್ಷಣ ತೀವ್ರ ನಿಗಾ ಘಟಕಕ್ಕೆ ಕರೆದೊಯ್ಯಲಾಗಿದ್ದು, ಶಸ್ತ್ರ ಚಿಕಿತ್ಸೆಗಾಗಿ ವ್ಯವಸ್ಥೆಯನ್ನ ಜಯದೇವ ಆಸ್ಪತ್ರೆಯ ವೈದ್ಯರು ಸಿದ್ಧತೆ ನಡೆಸಿದ್ದಾರೆ..

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.