ಉಜಿರೆ: ಜೆಸಿಐ ನೂತನ ಅಧ್ಯಕ್ಷರಾಗಿ ನವೀನ್ ಕುಮಾರ್ ಜೈನ್ ಪದಗ್ರಹಣ

ಉಜಿರೆ: ಎಸ್.ಡಿ.ಎಂ ಪದವಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ನವೀನ್ ಕುಮಾರ್ ಜೈನ್ ಉಜಿರೆ ಜೆ.ಸಿ.ಐ ವಲಯದ ಪ್ರಸಕ್ತ ವರ್ಷದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಇವರೊಂದಿಗೆ ದೀಕ್ಷಿತ್ ರೈ, ಸೌಮ್ಯ ನವೀನ್, ಪ್ರಜ್ವಲ್ ಅವರೂ ಪದಾಧಿಕಾರಿಗಳ ಹುದ್ದೆಯ ಅಧಿಕಾರ ಸ್ವೀಕರಿಸಿದರು. ಉಜಿರೆಯ ವನರಂಗ ಸಭಾಂಗಣದಲ್ಲಿ ಆಯೋಜನೆಗೊಂಡ ಕಾರ್ಯಕ್ರಮ ನೂತನ ಪದಾಧಿಕಾರಿಗಳ ಪದಗ್ರಹಣಕ್ಕೆ ಸಾಕ್ಷಿಯಾಯಿತು. ಜೆ.ಸಿ.ಐ ಅಧ್ಯಕ್ಷ ನವೀನ್ ಕುಮಾರ್ ಜೈನ್ ಮಾತನಾಡಿ ಪ್ರಸಕ್ತ ವರ್ಷದಲ್ಲಿ ಹಮ್ಮಿಕೊಳ್ಳಲಿರುವ ಉದ್ದೇಶಿತ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಜೆಸಿಐ ಕಾರ್ಯಕಾರಿ ಸಮಿತಿಯ ಮಾಜಿ ಅಧ್ಯಕ್ಷ ಪುರಂದರ ತರಬೇತಿಯ ಮೂಲಕ ಯುವಕರಲ್ಲಿ ನಾಯಕತ್ವ ಗುಣವನ್ನು ಬೆಳೆಸುವ ಅಗತ್ಯವನ್ನು ಪ್ರತಿಪಾದಿಸಿದರು. ಜೆ.ಸಿ.ಐ ವಲಯಾಧ್ಯಕ್ಷ ಜೆ.ಎಫ್.ಪಿ ಕಾರ್ತಿಕೇಯ ಮಧ್ಯಸ್ಥ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಸಾಮಾಜಿಕವಾಗಿ ಗುರುತಿಸಿಕೊಳ್ಳುವ ತುಡಿತ ಅಡಗಿರುತ್ತದೆ. ಜೆ.ಸಿ.ಐಯಂಥ ಸಮಾಜಮುಖಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವುದು ಹೆಮ್ಮೆಯ ವಿಚಾರ ಎಂದರು. ಜೆ.ಸಿ.ಐ ವಲಯ ಉಪಾಧ್ಯಕ್ಷ ಎಚ್.ಜಿ.ಎಫ್ ಮೇಧಾವಿ ಶುಭಕೋರಿದರು. ಜೆ.ಸಿ.ಐಯ ಅಧ್ಯಕ್ಷ ಸಂಪತ್ ಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ದೀಕ್ಷಿತ್‌ರೈ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.