ಸ್ವಚ್ಛತೆಯಲ್ಲಿ ಬೆಳ್ತಂಗಡಿ ಜಿಲ್ಲೆಯಲ್ಲೇ ಮುಂದಿದೆ; ನ್ಯಾಯಾಧೀಶ ಕೆ.ಎಂ ಆನಂದ

ಸಾಮಾನ್ಯ ಜನರು ಬೆಳಗಿನ ಜಾವ ಏಳುವ ಮುಂಚೆಯೇ ಬೆಳ್ತಂಗಡಿ ಪಟ್ಟಣದ ಅಧಿಕಾರಿ ಸಿಬ್ಬಂದಿಗಳು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ನಮ್ಮ ನಮ್ಮ ನಗರದ ಸ್ವಚ್ಛತೆಯ ಕಡೆಗೆ ಗಮನಹರಿಸಿ ಸ್ವಯಂ ಸೇವೆಯಲ್ಲಿ ತೊಡಗಿರುವುದು ಅಭಿನಂದನೀಯ. ಜಿಲ್ಲೆಯ ಇತರ ತಾಲೂಕು ಗಳಿಗಿಂತ ಹೆಚ್ಚು ಬೆಳ್ತಂಗಡಿ ಯು ಸ್ವಚ್ಛತೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಬೆಳ್ತಂಗಡಿ ಪ್ರಥಮ ದರ್ಜೆ ನ್ಯಾಯಾಧೀಶರಾದ ಕೆಎಂ ಆನಂದರವರು ಅಭಿಪ್ರಾಯಪಟ್ಟಿದ್ದಾರೆ ಅವರು ಅವರು 5ನೇ ವಾರ್ಡಿನ ವ್ಯಾಪ್ತಿಯಲ್ಲಿ ನಡೆದ ಸ್ವಚ್ಛತಾ ಅಭಿಯಾನದ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು.
ವಕೀಲರ ಸಂಘದ ಅಧ್ಯಕ್ಷ ಶ್ರೀ ಎಲೋಶಿಯಸ್ ರೋಬೋ ರವರು ಮಾತನಾಡಿ ಸ್ವಚ್ಛತೆಯು ಇಂದು ಪ್ರಾಥಮಿಕ ಅವಶ್ಯಕತೆಯಾಗಿದೆ ಹಾಗೂ ಇದನ್ನು ಪ್ರತಿಯೊಬ್ಬರು ಸ್ವಯಂಸ್ಫೂರ್ತಿಯಿಂದ ನಿರ್ವಹಿಸಬೇಕಾಗಿದೆ ಆ ಮೂಲಕ ಆರೋಗ್ಯವನ್ನು ಕಾಪಾಡಲು ಕಾರಣಕರ್ತರಾಗಬೇಕು ಎಂದು ಸಲಹೆ ನೀಡಿ ವಕೀಲರ ಸಂಘದ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಪ್ರಕಟಿಸಿದರು


ವಾರ್ಡ್ ಸದಸ್ಯರಾದ ಜನಾರ್ದನ್ ಕುಲಾಲ್, ನಿವೃತ್ತ ನೌಕರರ ಸಂಘದ ಪದ್ಮಕುಮಾರ್ ಮಂಜುಶ್ರೀ ಸೀನಿಯರ್ ಚೇಂಬರ್ ಸದಸ್ಯರಾದ ಪ್ರಮೋದ ನಾಯಕ್ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾದ ಜಯರಾಮ್, ಸ್ವಚ್ಛತಾ ಸೇನಾನಿ ಜಯರಾಮಾಚಾರ್ಯ, ನಿವೃತ್ತ ಸೇನಾನಿ ದಯಾನಂದ ವಕೀಲರ ಸಂಘದ ಸ್ವರ್ಣಲತ ಮುಮ್ತಾಜ್ ಬೇಗಂ ತಾಲೂಕು ಪಂಚಾಯತ್ ಬೆಳ್ತಂಗಡಿ ಅಧೀಕ್ಷಕಿ ಸುವರ್ಣ ಜಿ ಹೆಗಡೆ ಕಂದಾಯ ಇಲಾಖೆಯ ಅಮೀನ್ , ಎಸ್ .ಡಿ .ಎಂ. ಟ್ರಸ್ಟ್ ಉಜಿರೆ ವರ್ಧಮಾನ್ ಕೆ.ಎಂ. ಸ್ಥಳೀಯರಾದ ಗೌರಿ ಜಿ ಪಣಿಕ್ಕರ್, ಅಬ್ದುಲ್ ಲತೀಫ್ ಹರೀಶ್ ಕುಮಾರ್, ಶೇಖರ್, ಶ್ರೀಕಾಂತ್, ಸಂಜೀವ, ಮುತ್ತಪ್ಪ, ಕಮಲಾಕ್ಷ, ಪಟ್ಟಣ ಪಂಚಾಯತ್ ಸಿಬ್ಬಂದಿಗಳಾದ ಲಕ್ಷ್ಮೀನಾರಾಯಣ ವಿಶಾಲಾಕ್ಷಿ ವಸಂತಿ ಆನಂದ ಚಂದ್ರ ಬೋವಿ, ಶಮೀಮ, ವಿಜಯಕುಮಾರ್ ವೆಂಕಟರಮಣ ಶರ್ಮ ‌ಮಹಾವೀರ್ ಆರಿಗ ಹಾಗೂ ಸ್ಥಳೀಯ ಪುಟಾಣಿ ಮಕ್ಕಳು ಸಮೀರ್ ,ಸಂಶೀರ್ ಉತ್ಸಾಹ ದಿಂದ ಭಾಗವಹಿಸಿ ಗಮನಸೆಳೆದ ರು. ಮುಖ್ಯಾಧಿಕಾರಿ ಎಂಎಚ್ ಸುಧಾಕರ್ ಸಹಕರಿಸಿದ ಪ್ರತಿಯೊಬ್ಬರಿಗೂ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.