ಶ್ರೀ ಕ್ಷೇತ್ರ ಓಡೀಲು ಜಾತ್ರಾ ಮಹೋತ್ಸವ

ಪಡಂಗಡಿ: ಇಲ್ಲಿನ ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ಫೆ.3 ರಂದು ನಡೆಯಿತು.
ಶ್ರೀ ಕ್ಷೇತ್ರ ಓಡೀಲು ಜಾತ್ರಾ ಮಹೋತ್ಸವದ ಅಧ್ಯಕ್ಷ ರಾಜ್ ಪ್ರಕಾಶ್ ಶೆಟ್ಟಿ ಪಡ್ಡೈಲು ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ವೇದಮೂರ್ತಿ ಶ್ರೀವತ್ಸ ಕೆದಿಲಾಯ ಧಾರ್ಮಿಕ ಪ್ರವಚನ ನೀಡಿದರು.


ಅತಿಥಿಗಳಾಗಿ ಸಾಮಾಜಿಕ ಸ್ಥಾಯಿ ಸಮಿತಿಯ ಅಧ್ಯಕ್ಷೆ ಮಮತಾ ಎಂ ಶೆಟ್ಟಿ, ತಾಲೂಕು ಪಂ ಸದಸ್ಯ ಗೋಪಿನಾಥ್ ನಾಯಕ್, ಪಡಂಗಡಿ ಗ್ರಾ.ಪಂ ಅಧ್ಯಕ್ಷೆ ಮೀನಾಕ್ಷಿ ಶೆಟ್ಟಿ, ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್, ಗೌರವಾಧ್ಯಕ್ಷ ವಿಜಯ ಸಾಲ್ಯಾನ್ ಪಣಕಜೆ, ಪ್ರಧಾನ ಅರ್ಚಕ ಎಂ ರಘುರಾಮ ಭಟ್ ಮಠ ಮೊದಲಾದವರು ಉಪಸ್ಥಿತರಿದ್ದರು. ಬೆಳಿಗ್ಗೆ ೭ ರಿಂದ ಗಣಯಾಗ, ಆಶ್ಲೇಷಾ ಬಲಿ, ಮಹಾರುದ್ರ ಯಾಗ, ಪಂಚವಿಂಶತಿ, ಕಲಶಾಧಿವಾಸ ಪ್ರಧಾನ ಹೋಮ, ೧೧ ರಿಂದ ಯಾಗದ ಪೂರ್ಣಾಹುತಿ, ಕಲಾಭಿಷೇಕ, ಮಹಾಪೂಜೆ, ಧ್ವಜಾರೋಹಣ, ಅನ್ನಸಂತರ್ಪಣೆ, ಸಂಜೆ ೬.೩೦ ರಿಂದ ರಂಗಪೂಜೆ, ಮಹೋತ್ಸವ ದೇವರ ನೃತ್ಯ ಬಲಿ, ಬಟ್ಟಲು ಕಾಣಿಕೆ, ದೈವಗಳ ಭೇಟಿ ಮೊದಲಾದ ವೈದಿಕ ಕಾರ್ಯಕ್ರಮ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.