ಫೆ. 7-16: ಕಾಜೂರು ಉರೂಸ್: ಉರೂಸ್ ಸಮಾರೋಪಕ್ಕೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಜೂರಿಗೆ

Advt_NewsUnder_1
Advt_NewsUnder_1

ಬೆಳ್ತಂಗಡಿ: ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಸರ್ವಧರ್ಮೀಯರ ಸಮನ್ವಯ ಕೇಂದ್ರ, ಕಾಜೂರು ದರ್ಗಾ ಶರೀಫ್‌ನಲ್ಲಿ ಈ ವರ್ಷದ ಉರೂಸ್ ಸಂಭ್ರಮ ಫೆ. 7ರಿಂದ 16 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಗೌರವಾಧ್ಯಕ್ಷ ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಮತ್ತು ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಕೂರತ್ ತಂಙಳ್ ಅವರ ಮಾರ್ಗದರ್ಶನದಲ್ಲಿ ನಡೆಯುವ ಕಾರ್ಯಕ್ರಮದ ನೇತೃತ್ವವನ್ನು ಸಯ್ಯಿದ್ ಕಾಜೂರು ತಂಙಳ್ ವಹಿಸಲಿದ್ದಾರೆ.
ಫೆ. 7 ರಂದು ಉರೂಸ್ ಸಮಾರಂಭದ ಉದ್ಘಾಟನೆಯನ್ನು ತಾ| ಸುನ್ನೀ ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್ ನೆರವೇರಿಸಲಿದ್ದಾರೆ ಎಂದು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ, ಕಾರ್ಯದರ್ಶಿಗಳಾದ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಮತ್ತು ಕಾಸಿಂ ಮಲ್ಲಿಗೆಮನೆ ಕಿಲ್ಲೂರು ಪತ್ರಿಕಾಗೋಷ್ಠಿಯಲ್ಲಿ ಇಂದು ತಿಳಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಸಯ್ಯಿದ್ ಕಿಲ್ಲೂರು ತಂಙಳ್, ಅಬ್ದುಲ್ ಹಮೀದ್ ಫೈಝಿ ಸಹಿತ ಪ್ರಮುಖ ಗಣ್ಯರುಗಳು ಭಾಗವಹಿಸಲಿದ್ದಾರೆ. ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೊಳಿ ಸಂದೇಶ ಭಾಷಣ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ತಾಲೂಕಿನ ಎಲ್ಲ ಮಸ್ಜಿದ್‌ಗಳ ಅಧ್ಯಕ್ಷರುಗಳು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರುಗಳು ಭಾಗವಹಿಸಲಿದ್ದಾರೆ.

10 ದಿನಗಳಲ್ಲಿ ಧಾರ್ಮಿಕ ಉಪನ್ಯಾಸ:
ಉರೂಸ್ ಪ್ರಯುಕ್ತ 10 ದಿನಗಳಲ್ಲಿ ಪ್ರತಿದಿನ ರಾತ್ರಿ ಕರ್ನಾಟಕ- ಕೇರಳದ ಪ್ರಸಿದ್ಧ ವಾಗ್ಮಿಗಳಿಂದ ಧಾರ್ಮಿಕ ಪ್ರವಚನ ನಡೆಯಲಿದೆ. ಈ ಉಪನ್ಯಾಸ ಮಾಲಿಕೆಯನ್ನು ಫೆ. 7 ರಂದು ಸಯ್ಯಿದ್ ಕಾಜೂರು ತಂಙಳ್ ಉದ್ಘಾಟಿಸಲಿದ್ದು, ಅಂದು ವಿಶ್ವವಿಖ್ಯಾತ ಪ್ರವಚನಗಾರ ಡಾ. ಫಾರೂಕ್ ನಈಮಿ ಕೊಲ್ಲಂ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ.

ಫೆ. 13 ರಂದು ಆಧ್ಯಾತ್ಮಿಕ ಕಾರ್ಯಕ್ರಮವಾದ “ಬೃಹತ್ ದ್ಸಿಕ್ರ್ ಮಜ್ಲಿಸ್” ನಡೆಯಲಿದ್ದು, ಸಯ್ಯಿದ್ ಬಾಯಾರ್ ತಂಙಳ್ ನೇತೃತ್ವ ವಹಿಸಲಿದ್ದಾರೆ.
ಈ ಸಮಾರಂಭದಲ್ಲಿ ಸಯ್ಯಿದರುಗಳಾದ ಕಾಜೂರು ತಂಙಳ್, ಮಲ್‌ಜಅ ತಂಙಳ್, ಕಿಲ್ಲೂರು ತಂಙಳ್, ಮನ್ಶರ್ ತಂಙಳ್, ಮುರ ತಂಙಳ್, ಸಬರಬೈಲು ತಂಙಳ್, ಕಲ್ಲೇರಿ ತಂಙಳ್, ಇಸ್ಮಾಯಿಲ್ ತಂಙಳ್, ಬೆಳಾಲು ತಂಙಳ್, ತೀರ್ಥಹಳ್ಳಿ ತಂಙಳ್, ಗಂಜಿಮಠ ತಂಙಳ್, ಅಬ್ದುಸ್ಸಲಾಂ ತಂಙಳ್, ಜಿಫ್ರಿ ತಂಙಳ್ ದಾರುಸ್ಸಲಾಂ ಬೆಳ್ತಂಗಡಿ, ಮಾಣಿ ಉಸ್ತಾದ್, ಹಾಸನ ಹಝ್ರತ್ ಸಹಿತ ಅನೇಕ ಮಂದಿ ಉಲಮಾಗಳು, ಸಾಮಾಜಿಕ- ಧಾರ್ಮಿಕ ನಾಯಕರುಗಳು ಭಾಗವಹಿಸಲಿದ್ದಾರೆ.

ಫೆ. 15 ರ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸ ಪೇರೋಡ್ ಉಸ್ತಾದ್‌ರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ. ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಬೇಕಲ್ ಉಸ್ತಾದ್ ಸಹಿತ ಗಣ್ಯರುಗಳು ಭಾಗಿಯಾಗಲಿದ್ದಾರೆ.

ಫೆ. 16: ಉರೂಸ್ ಸಮಾರೋಪ; ಸರ್ವಧರ್ಮೀಯರ ಸೌಹಾರ್ದ ಸಂಗಮ:
ಫೆ. 16 ರಂದು ಸಂಜೆ ಸರ್ವಧರ್ಮೀಯರ ಸೌಹಾರ್ದ ಸಮಾರಂಭ ನಡೆಯಲಿದ್ದು, ಕುಂಬೋಳ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ವಕ್ಫ್ ಸಚಿವ ಪ್ರಭು ಚೌಹಾನ್ ವಿದ್ಯಾರ್ಥಿ ನಿಲಯ ಕಟ್ಟಡ ಉದ್ಘಾಟಿಸಲಿದ್ದಾರೆ. ಈ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರುಗಳಾದ ಹರೀಶ್ ಪೂಂಜ, ಹರೀಶ್ ಕುಮಾರ್, ಬಿ.ಎಂ ಫಾರೂಕ್ ಮತ್ತು ಐವನ್ ಡಿಸೋಜಾ, ವಕ್ಫ್ ಚೇರ್‌ಮೆನ್ ಡಾ. ಯೂಸುಫ್ ಖಾನ್, ಮಾಜಿ ಸಚಿವರುಗಳಾದ ಯು.ಟಿ ಖಾದರ್, ಝಮೀರ್ ಅಹಮ್ಮದ್, ರಮಾನಾಥ ರೈ ಮತ್ತು ಗಂಗಾಧರ ಗೌಡ, ಮಾಜಿ ಮುಖ್ಯ ಸಚೇತಕ ವಸಂತ ಬಂಗೇರ, ಮಾಜಿ ಶಾಸಕರಾದ ಮೊದಿನ್ ಬಾವಾ ಮತ್ತು ಪ್ರಭಾಕರ ಬಂಗೇರ, ಜಿಲ್ಲಾ ಪೊಲೀಸ್ ಎಸ್‌ಪಿ ಲಕ್ಷ್ಮೀ ಪ್ರಸಾದ್ ಐಪಿಎಸ್, ಬಿಬಿಎಂಪಿ ಕಾರ್ಪೋರೇಟರ್ ಮುಜಾಹಿದ್ ಪಾಷಾ, ಯೆನಪೋಯ ಅಬ್ದುಲ್ಲಕುಂಞಿ, ಶಾಫಿ ಸಅದಿ ಬೆಂಗಳೂರು, ಡಾ. ಅಬ್ದುರ್ರಶೀದ್ ಝೈನಿ, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಮುಹಮ್ಮದ್ ಮಸೂದ್ ಮೊದಲಾದವರು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಉರೂಸ್ ಸಮಿತಿ ಪದಾಧಿಕಾರಿಗಳಾದ ಕೆ. ಮುಹಮ್ಮದ್ ಕಿಲ್ಲೂರು, ಮುಹಮ್ಮದ್ ಕಮಾಲ್ ಮತ್ತು ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಕಿಲ್ಲೂರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.