ನ್ಯಾಯತರ್ಪು : ಇಲ್ಲಿಯ ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಲೆಕ್ಕ ಪತ್ರ ಮಂಡನೆ ಹಾಗೂ ವಿವಿಧ ಸಮಿತಿ ಪದಾಧಿಕಾರಿಗಳಿಗೆ ಮತ್ತು ಭಕ್ತಾಧಿಗಳಿಗೆ ಅಭಿನಂದನೆ ಕಾರ್ಯಕ್ರಮ ಫೆ.2 ರಂದು ಜರುಗಿತು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ಮಜಲು ಅಧ್ಯಕ್ಷತೆಯಲ್ಲಿ ದೇವಸ್ಥಾನದ ಅನ್ನಛತ್ರದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡುತ್ತಾ ಜ.24 ರಿಂದ ಜ.31 ರ ತನಕ ದೇವರ ಉತ್ಸವ ,ದೈವಗಳ ಗಗ್ಗರ ನರ್ತನ ಸೇವೆ, ಅನ್ನದಾನ ಸೇವೆ ಮತ್ತು ವೇದಿಕೆಯಲ್ಲಿ ವಿವಿಧ ಸಂಸ್ಕೃಾತಿಕ ಪ್ರದರ್ಶನಗಳು ಯಶಸ್ವಿಯಾಗಿ ನಡೆಯಿತು.ಪದಾಧಿಕಾರಿಗಳ,ವಿವಿಧ ಸಮಿತಿಯ ಸದಸ್ಯರ ಹಾಗೂ ಭಕ್ತಾದಿಗಳ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದರು. ವ್ಯವಸ್ಥಾಪಕರಾದ ಗಿರೀಶ್ ಶೆಟ್ಟಿ ಲೆಕ್ಕ ಪತ್ರ ಮಂಡಿಸಿದರು. ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ.ರಾಘವೇಂದ್ರ ಅಸ್ರಣ್ಣ,ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿ ಸದಸ್ಯರಾದ ಅನಂದ ಶೆಟ್ಟಿ ಪಣೆಜಾಲು,ದಿನೇಶ್ ಗೌಡ ಕಲಾಯಿತೊಟ್ಟು, ಅಂಬಾ ಬಿ. ಅಳ್ವ,ವಿಜಯ ಹೆಚ್.ಪ್ರಸಾದ್,ಭಾರತಿ ವಸಂತ್ ವಂಜಾರೆ,ವಿವಿಧ ಸಮಿತಿ ಅಧ್ಯಕ್ಷರು,ಸದಸ್ಯರು ಮತ್ತು ಭಕ್ತಾಧಿಗಳು ಭಾಗವಹಿಸಿದ್ದರು. ಗಿರೀಶ್ ಶೆಟ್ಟಿ ಸ್ವಾಗತಿಸಿ,ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ ಧನ್ಯವಾದವಿತ್ತರು.