HomePage_Banner_
HomePage_Banner_
HomePage_Banner_

ತೆಂಕಕಾರಂದೂರು :2,18,000 ಮೌಲ್ಯದ ಚಿನ್ನಭರಣ ಕಳವು

Advt_NewsUnder_1

ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕಕಾರಂದೂರು ಗ್ರಾಮದ ಕೆಮನಬೈಲು ನಿವಾಸಿ ದಯಾನಂದ ಕೆ (32)ರವರು ಜ.೩೦ ರಂದು  ಮದ್ಯಾಹ್ನ 12-15 ಗಂಟೆಗೆ ಮನೆಗೆ ಬೀಗ ಹಾಕಿ ಹೋದವರು ಮದ್ಯಾಹ್ನ 01-15 ಗಂಟೆಗೆ ವಾಪಾಸು ಮನೆಗೆ ಬಂದಾಗ ಮನೆಯ ಎದುರಿನ ಬಾಗಿಲಿನ ಬೀಗವನ್ನು ಮುರಿದಿರುವುದು ಕಂಡು ಬಂದಿದ್ದು, ಒಳ ಪ್ರವೇಶಿಸಿ ಪರಿಶೀಲಿಸಿದಾಗ ಮನೆಯಲ್ಲಿದ್ದ 10,000ರೂ ನಗದು, ಹಾಗೂ ಅಂದಾಜು 2,18,000 ಮೌಲ್ಯದ ಚಿನ್ನಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿದ್ದು, ಅಲ್ಲದೇ ಸುಮಾರು 6 ಕೆಜಿ ಹಸಿ ಕರಿಮೆಣಸನ್ನು ಕಳವು ಮಾಡಿದ್ದು ಇದರ ಅಂದಾಜು ಬೆಲೆ 1000 ಆಗಿದ್ದು, ಕಳವಾಗಿರುವ ಸೊತ್ತುಗಳ ಒಟ್ಟು ಮೌಲ್ಯ 2,29,000 ಆಗಬಹುದು. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಕಲಂ : 454,380 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.