ಬಾರ್ಯ ದೇವಸ್ಥಾನ ಬ್ರಹ್ಮಕಲಶೋತ್ಸವದ ಉಗ್ರಾಣ ಮೂಹೂರ್ತ

Advt_NewsUnder_1
Advt_NewsUnder_1
Advt_NewsUnder_1

ಧಾರ್ಮಿಕ ಕಾರ್ಯಗಳಲ್ಲಿ ಸ್ವಯಂ ಪ್ರೇರಿತರಾಗಿ ತೊಡಗಿಸಿಕೊಳ್ಳಿ : ಹರೀಶ್ ಪೂಂಜ


ಬಾರ್ಯ : ಫೆ.2 ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಉಗ್ರಾಣ ಮೂಹೂರ್ತದ ದೀಪ ಬೆಳಗಿಸಿ ಮಾತನಾಡಿ ಧಾರ್ಮಿಕ ಶ್ರದ್ಧಾಕೆಂದ್ರಗಳ ಕೆಲಸ ಕಾರ್ಯಗಳಲ್ಲಿ ಸ್ವಯಂಪ್ರೇರಿತರಾಗಿ ತೊಡಗಿಸಿಕೊಳ್ಳುವ ಮೂಲಕ ನೆಮ್ಮದಿಯ ಬದುಕು ರೂಪಿಸಲು ಸಾಧ್ಯ. ಗ್ರಾಮದ ಪ್ರತಿಯೋರ್ವರೂ ದೇಗುಲದ ಸ್ವಚ್ಛತೆ ಹಾಗೂ ಒಗ್ಗಟ್ಟಿನ ಪರಿಕಲ್ಪನೆಯಿಂದ ಬರುವ ಭಕ್ತರನ್ನು ಸತ್ಕರಿಸಿ ಯಶಸ್ವಿಯಾಗುವಲ್ಲಿ ಸಹಕರಿಸಿ ಪ್ರತಿ ಮನೆ ಮಂದಿ ನೆಂಟರಿಷ್ಟರನ್ನು ಆಮಂತ್ರಿಸಿ ಕ್ಷೇತ್ರಕ್ಕೆ ಮಾದರಿಯಾಗುವಲ್ಲಿ ಪ್ರಯತ್ನಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ದೇಗುಲದ ಆಡಳಿತ ಮೋಕ್ತೇಸರ ಬಿ.ವಿ ಸುಂದರ ನೂರಿತ್ತಾಯ, ಆಡಳಿತ ಸಮಿತಿ ಉಪಾಧ್ಯಕ್ಷ ಪ್ರಶಾಂತ್ ಫೈ. ಜೀರ್ಣೋದ್ಧಾರ ಸಮಿತಿ ಕಾರ್‍ಯದರ್ಶಿ ಗಣೇಶ ಪುತ್ತಿಲ, ಮಂಜುನಾಥ ಸಾಲಿಯಾನ್, ರಾಜೇಶ್ ರೈ ಹೆನ್ನಡ್ಕ ಇತರ ಪದಾಧಿಕಾಗಳಾದ ಜಯನಂದ ಕಲ್ಲಾಪು, ಅರುಣ್ ಕುಮಾರ್ ಬರಂಗಳ, ಗುರುಪ್ರಸಾದ್, ಬಾಸ್ಕರ್ ಬಾರ್ಯ, ಬಾರ್ಯ ಸಿ.ಎ ಬ್ಯಾಂಕ್ ಅಧ್ಯಕ್ಷ ಸುಬ್ರಮಣ್ಯ ಗೌಡ, ಪಾಡುರಂಗ, ಸುರೇಶ್ ಕಲ್ಲಾಪು, ಪ್ರವೀಣ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಮೇಲ್ವಿಚಾರಕ ಯಶವಂತ್, ಮೋನಪ್ಪ ಗೌಡ, ವಿಜಯಲಕ್ಷ್ಮೀ, ಪ್ರಮೀಳಾ, ಹೇಮಾವತಿ, ವಸಂತ ಮಜಿಕುಡೇಲು, ಕೇಶಾವತಿ ಆಲಡ್ಯ ಉಪಸ್ಥಿತರಿದ್ದರು.

ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಮನೋಹರ್ ಬಾರ್ಯ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಪ್ರಧಾನ ಕಾರ್‍ಯದರ್ಶಿ ಸೇಸಪ್ಪ ಸಾಲಿಯಾನ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.