ಮಡಂತ್ಯಾರಿನಲ್ಲಿ ಕಥೊಲಿಕ ಮಹಾ ಸಮಾವೇಶ; ಸಾವಿರಾರು ಮಂದಿ ಸಾಕ್ಷಿಯಾದ ಅಭೂತಪೂರ್ವ ಕಾರ್ಯಕ್ರಮ

ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ ಇದರ ಮುಂದಾಳತ್ವದಲ್ಲಿ ಭಾರತೀಯ ಕಥೋಲಿಕ ಯುವ ಸಂಚಲನ ಹಾಗೂ ಕಥೋಲಿಕ ಸ್ತ್ರೀ ಮಂಡಳಿ ಇವರ ಸಹಯೋಗದಲ್ಲಿ ಮಂಗಳೂರು, ಬೆಳ್ತಂಗಡಿ, ಹಾಗೂ ಪುತ್ತೂರು ಧರ್ಮಪ್ರಾಂತ್ಯದ ಕಥೊಲಿಕ ಮಹಾ ಸಮಾವೇಶ-೨೦೨೦ ಕಾರ್ಯಕ್ರಮ ಇಂದು ಮಡಂತ್ಯಾರು ಸೇಕ್ರೆಟ್ ಹಾರ್ಟ್ ಮೈದಾನದಲ್ಲಿ ನಡೆಯಿತು.
ಭವ್ಯ ಮೆರವಣಿಗೆಯನ್ನು ಮಂಗಳೂರು ಧರ್ಮಪ್ರಾಂತ್ಯದ ದರ್ಮಾಧ್ಯಕ್ಷ ವಂ. ಡಾ. ಪೀಟರ್ ಪಾವ್ಲ್ ಸಲ್ದಾನಾ ನೆರವೇರಿಸಿದರು.
ಧ್ವಜಾರೋಹಣವನ್ನು ಕಥೊಲಿಕ ಮುಖಂಡ ಹಾಗೂ ಅನಿವಾಸ ಭಾರತೀಯ ಉದ್ಯಮಿ ರೊನಾಲ್ಡ್ ಕುಲಾಸೋ ನೆರವೇರಿಸಿದರು.
ಉದ್ಘಾಟನೆಯನ್ನು ಮಂಗಳೂರು ಧರ್ಮಪ್ರಾಂತ್ಯದ ದರ್ಮಾಧ್ಯಕ್ಷ ವಂ. ಡಾ. ಪೀಟರ್ ಪಾವ್ಲ್ ಸಲ್ದಾನಾ ನೆರವೇರಿಸಿದರು.
ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ. ಫಾ. ಗೀವರ್ಗೀಸ್ ಮಾರ್ ಮಕಾರಿಯೋಸ್, ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ. ಫಾ ಬಿಷಪ್ ಲಾರೆನ್ಸ್ ಮುಕ್ಕುಯಿ ದಿಕ್ಸೂಚಿ ಭಾಷಣ ಮಾಡಿದರು.
ಐಸಿವೈಎಂ ಮಂಗಳೂರು ಧರ್ಮಪ್ರಾಂತ್ಯದ ಲಿಯೋನ್ ಸಲ್ಡಾನಾ ಪ್ರತಿಜ್ಞಾ ವಿಧಿ ಬೋಧಿಸಿದರು.
ಅಧ್ಯಕ್ಷತೆಯನ್ನು ಕಥೊಲಿಕ ಸಭಾದ ಮಂಗಳೂರು ಪ್ರಾಂತ್ಯದ ಅಧ್ಯಕ್ಷ ರೋಲ್ಫಿ ಡಿಕೋಸ್ತಾ ನೆರವೇರಿಸಿದರು.
ವೇದಿಕೆಯಲ್ಲಿ ಬೊನವೆಂಚರ್ ನಝ್ರೆತ್, ಅರುಣ್ ಫೂರ್ಟಾಡೋ, ಡಾ. ರೋನಾಲ್ಡ್ ಫೆರ್ನಾಂಡಿಸ್,ಫಾ ಬಿನೋಯ್ ಜೋಸೆಫ್, ರೆ. ಫಾ ಬೇಸಿಲ್ ವಾಸ್, ಸೆಬಾಸ್ಟಿಯನ್ ಕೆ.ಕೆ.,ಸ ಜೋಯೆಲ್ ಮೆಂಡೋನ್ಸಾ, ಫ್ರಾನ್ಸಿಸ್ ವಿ.ವಿ, ವಿವೇಕ್ ವಿನ್ಸೆಂಟ್ ಪಾಯಿಸ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಸಚಿವ ಯು.ಟಿ ಖಾದರ್, ವಿಧಾನ ಪರಿಷತ್ತು ಶಾಸಕರುಗಳಾದ ಐವನ್ ಡಿಸೋಜಾ ಮತ್ತು ಹರೀಶ್ ಕುಮಾರ್, ವಿಧಾನ ಸಭಾ ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ಜೆ.ಆರ್ ಲೋಬೋ ಮೊದಲಾದವರು ಆಗಮಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.