ಬದಿನಡೆ,ಮಂಜಲಡ್ಕ ದೈವಗಳಿಗೆ ಮರದ ಕೆತ್ತನೆ ಕೆಲಸಕ್ಕೆ ವೀಳ್ಯೆ

Advt_NewsUnder_1
Advt_NewsUnder_1
Advt_NewsUnder_1

ಗೇರುಕಟ್ಟೆ : ಇಲ್ಲಿಯ ಕಳಿಯ ಗ್ರಾಮದ ಬದಿನಡೆ, ಮಂಜಲಡ್ಕ ದೈವಗಳಿಗೆ ಮರದ ಪೀಠೋಪಕರಣಗಳ ಕೆತ್ತನೆ ಕೆಲಸಕ್ಕೆ, ಗೌರವಾಧ್ಯಕ್ಷ ವೇ.ಮೂ.ಶ್ರೀ ರಾಘವೇಂದ್ರ ಬಾಂಗಿಣ್ಣಾ,ಕಾರ್ಯಾಧ್ಯಕ್ಷರಾದ ಕಳಿಯ ಬೀಡು ಮನೆತನದ ಸುರೇಂದ್ರ ಕುಮಾರ್ ನೇತೃತ್ವದಲ್ಲಿ, ಶಿಲ್ಪಿ ನಾಳ ಶ್ಯಾಮರಾಯ ಅಚಾರ್ಯ ಮತ್ತು ಪುತ್ರ ಶಿಲ್ಪಕಲಾ ಪ್ರಶಸ್ತಿ ವಿಜೇತ ಜಯ ಚಂದ್ರ ಆಚಾರ್ಯ ಅವರಿಗೆ ಫೆ.1ರಂದು ಬೆಳಿಗ್ಗೆ ವೀಳ್ಯ ನೀಡಿವ ಮೂಲಕ ಚಾಲನೆ ನೀಡಿದರು. ಹಾಗೂ ಮೇ.13 ರಿಂದ 17 ರ ತನಕ ಪುನರ್ ಪ್ರತಿಷ್ಠೆ,ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.


ಕಳಿಯ ಇತಿಹಾಸ ಪ್ರಸಿದ್ಧ ಕಳಿಯಬೀಡು ಮನೆತನದ ನೇತೃತ್ವದಲ್ಲಿ ಅನಾದಿಕಾಲದಿಂದಲೂ ಆಾರಾಧಿಸಲ್ಪಡುತ್ತಿದ್ದ ಬದಿನಡೆಯ ಉಳ್ಳಾಕುಳು,ಉಳ್ಳಾಳ್ತಿ(ಬಂಗಾಡಿ ದೈವಗಳು) ರಕ್ತೇಶ್ವರಿ, ಮಹಿಷಂತಾಯ ಮತ್ತು ಪಂಜುರ್ಲಿ ದೈವ ಹಾಗೂ ಮಂಜಲಡ್ಕ ದೈವ ಗಳಾದ ಕೊಡಮಣಿತ್ತಾಯ, ವ್ಯಾಘ್ರ ಚಾಮುಂಡೇಶ್ವರಿ ಮತ್ತು ಕಲ್ಕುಡ ದೈವಗಳ ಕ್ಷೇತ್ರದಲ್ಲಿ ಸುಮಾರು 75 ವರ್ಷಗಳಿಂದ ಕಾಲಾವಧಿಯ ಪರ್ವಸೇವೆ, ನರ್ತನ ಸೇವೆಗಳು ಸ್ಥಗಿತ ಗೊಂಡಿದೆ ಎಂಬುದನ್ನು ಈ ಹಿಂದೆ ದೈವಜ್ಞರಿಂದ ತಿಳಿದು ಗ್ರಾಮದ ಭಗವಧ್ಭಕ್ತರೆಲ್ಲರೂ ಸೇರಿ ದೈವಗಳಿಗೆ ದೈವಸ್ಥಾನ ನಿರ್ಮಿಸಲು ಊರಿನ, ಪರ ಊರಿನ ಭಕ್ತಾಧಿಗಳು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಸು‌ರ್ಣೇಂದ್ರ ಕುಮಾರ್, ಕಾರ್ಯದರ್ಶಿ ಸತ್ಯೇಂದ್ರ ಕುಮಾರ್,ಕೋಶಾಧಿಕಾರಿ ಕೂಸಪ್ಪ ಗೌಡ ಹೀರ್ಯ. ಬೋಜ ಶೆಟ್ಟಿ ಮುಗೇರುಮಾರು,ಕಳಿಯ ಪಂಚಾಯತ ಸದಸ್ಯ ತುಕರಾಮ ಪೂಜಾರಿ, ಮಂಗಳೂರು ಕುದ್ರೋಳಿ ನಾರಾಯಣ ಗುರು ಕಾಲೇಜ್ ಉಪನ್ಯಾಸಕ ಕೇಶವ ಬಂಗೇರ, ರೈಲ್ವೆ ಅಧಿಕಾರಿ ಸತೀಶ್ ಆರ್.ಎನ್. ಸಂಜೀವ ಬಂಗೇರ ಬೇರ್ಕೆತ್ತೋಡಿ,ಉದ್ಯಮಿ ಯಶೋಧರ ಶೆಟ್ಟಿ ಕೊರಂಜ, ಉಮೇಶ್ ಪೂಜಾರಿ ಬಳ್ಳಿದಡ್ಡ. ಬೊಮ್ಮಣ್ಣ ಪೂಜಾರಿ ಬಳ್ಳಿದಡ್ಡ,ಪುರಂದರ ಶೆಟ್ಟಿ ಭಂಡಾರಿಕೋಡಿ,ಅಪ್ಪಯ್ಯ ಶೆಟ್ಟಿ ಕುಂಠಿನಿ,ಸುಂದರ ಬಂಗೇರ ಬರಾಯ, ತಾರಾನಾಥ ಬಳ್ಳಿದಡ್ಡ,ರತ್ನಾಕರ ಬಳ್ಳಿದಡ್ಡ,ಪ್ರಮೋದ ಬಳ್ಳಿದಡ್ಡ, ಕಮಲಾಕ್ಷ ಬಳ್ಳಿದಡ್ಡ, ಪುರಂದರ ಗೇರುಕಟ್ಟೆ ಹಾಗೂ ಪದಾಧಿಕಾರಿಗಳು,ಸರ್ವಸದಸ್ಯರು,ಭಕ್ತಾಧಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು. 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.