ಚೆಕ್ ಅಮಾನ್ಯ ಪ್ರಕರಣ; ಆರೋಪಿಗೆ ಶಿಕ್ಷೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಬೆಳ್ತಂಗಡಿ ಗ್ರಾಹಕರ ಸಹಕಾರ ಸಂಘ (ನಿ) ಇಲ್ಲಿಂದ ಸಾಲ ಪಡೆದು ಮರುಪಾವತಿಯ ಬಗ್ಗೆ ನೀಡಿದ ಚೆಕ್ ಅಮಾನ್ಯಗೊಂಡು ದಾಖಲಿಸಲ್ಪಟ್ಟ ಪ್ರಕರಣದಲ್ಲಿ ಆರೋಪಿ ಉಜಿರೆ ಗ್ರಾಮದ ಶಿವಾಜಿ ನಗರ ನಿವಾಸಿ ಹರಿಕೃಪಾರವರಿಗೆ ಶಿಕ್ಷೆ ವಿಧಿಸಿ ಬೆಳ್ತಂಗಡಿಯ ಮಾನ್ಯ ಪ್ರಧಾನ ಹಿರಿಯ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಬಿ.ಕೆ ನಾಗೇಶ ಮೂರ್ತಿ ತೀರ್ಪು ನೀಡಿದ್ದಾರೆ.
ಬೆಳ್ತಂಗಡಿ ಗ್ರಾಹಕರ ಸಹಕಾರ ಸಂಘ (ನಿ) ಇಲ್ಲಿಂದ ಆರೋಪಿ ಸಾಲ ಮರು ಪಾವತಿಯ ಬಗ್ಗೆ ರೂ. 2,33,473/-ನ್ನು ಚೆಕ್ ಮೂಲಕ ಪಾವತಿಸುವುದಾಗಿ ಫಿರ್ಯಾಧಿದಾರರಿಗೆ ಚೆಕ್ ನೀಡಿದ್ದರು. ಸದ್ರಿ ಚೆಕ್‍ನ್ನು ನಗದೀಕರಣಕ್ಕಾಗಿ ಆರೋಪಿಯ ಬ್ಯಾಂಕ್‍ನಲ್ಲಿ ಸಲ್ಲಿಸಿದಾಗ ಆರೋಪಿಯ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲ ಎಂಬ ಕಾರಣಕ್ಕಾಗಿ ಚೆಕ್ ಹಿಂದಕ್ಕೆ ಬಂದಿತ್ತು. ಇದರ ವಿರುದ್ದ ಸಂಘದ ಕಾರ್ಯದರ್ಶಿ ಈಶ್ವರ್ ರವರು ನ್ಯಾಯಾಲಯದಲ್ಲಿ ಖಾಸಾಗಿ ಫಿರ್ಯಾಧಿ ಸಲ್ಲಿಸಿದ್ದರು. ಸದ್ರಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾದೀಶರು ಆರೋಪಿಯು ಫಿರ್ಯಾಧಿದಾರರಿಗೆ ರೂ. 2,97,316/-ನ್ನು ಪಾವತಿಸಬೇಕು ತಪ್ಪಿದ್ದಲ್ಲಿ 1 ವರ್ಷದ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಿದ್ದಾರೆ. ಫಿರ್ಯಾಧಿದಾರರ ಪರ ಬೆಳ್ತಂಗಡಿಯ ನ್ಯಾಯವಾದಿಗಳಾದ ಮನೋಹರ ಕುಮಾರ್, ಇಳಂತಿಲ ಮತ್ತು ಶೋಭಾ ಎಸ್. ಆಚಾರ್ಯ, ನಾಳ ವಾದಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.