ಪೆ:6-10 ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಜಾತ್ರೆ

Advt_NewsUnder_1
Advt_NewsUnder_1
Advt_NewsUnder_1

ನಿಟ್ಟಡೆ: ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಬರ್ಕಜೆಯ 5ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು ಚಂಡಿಕಾಯಾಗವು ಫೆ.9 ರಿಂದ 10ರವರೆಗೆ ವಿಜೃಂಭನೆಯಿಂದ ನಡೆಯಲಿದೆ.
ಫೆ. 6 ರಂದು ವಾಸ್ತು ಪೂಜೆ, ವಾಸ್ತು ಹೋಮ, ದಿಕ್ ಬಲಿ, ಫೆ.7ರಂದು ನಾಗಬನದಲ್ಲಿ ಶ್ರೀ ನಾಗದೇವರಿಗೆ ತಂಬಿಲ, ಬೆಳಿಗ್ಗೆ 8 ರಿಂದ ಶ್ರೀ ದುರ್ಗಾ ದೇವಿ ಗುಡಿಯಲ್ಲಿ ಚಂಡಿಕಾಯಾಗ, ಪಂಚಾಮೃತ ಅಭಿಷೇಕ, ಪಂಚವಿಂಶನೆ ಕಲಶ, ಪಲ್ಲಪೂಜೆ, ನವಗ್ರಹ ಪ್ರತಿಷ್ಟ, ಕಲಶಾಭಿಷೇಕ, ಮಧ್ಯಾಹ್ನ 9 ಗುಳಿಗೆಗಳ ವಿಶೇಷ ಗಗ್ಗರ ಸೇವೆ ನಡೆಯಲಿದೆ. ರಾತ್ರಿ ವಿಶೇಷ 109 ರಂಗಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

ಫೆ.9ರಂದು ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದ ಪ್ರಧಾನ ಅರ್ಚಕರಾದ ಕೆ ಲಕ್ಷ್ಮೀ ನಾರಾಯಣ ಅಸ್ರಣ್ಣಾಯ ಪ್ರವಚನ ಮಾಡುವರು. ಡಾ| ಸುಧಾಕರ್ ಅಧ್ಯಕ್ಷತೆ ವಹಿಸುವರು. ಶಾಸಕರಾದ ಹರೀಶ್ ಪೂಂಜ, ಜನಜಾಗೃತಿ ವೇದಿಕೆಯ ಸ್ಥಾಪಕಧ್ಯಕ್ಷ ವಸಂತ್ ಸಾಲ್ಯಾನ್, ಜಯ ಕರ್ನಾಟಕ ಸಂಘಟನಾ ಕಾರ್ಯದರ್ಶಿ ಸುರೇಂದ್ರ ನಾಥ ಆಳ್ವ, ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ, ತಾ.ಪಂ ಸದಸ್ಯೆ ಸುಶೀಲ, ಕುಕ್ಕೇಡಿ ಗ್ರಾ.ಪಂ ಅಧ್ಯಕ್ಷೆ ತೇಜಾಕ್ಷಿ, ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ ಪಿರ ಪೊಡು0ಗೆ ನಾಟಕ ಪ್ರದರ್ಶನಗೊಳ್ಳಲಿದೆ. ಫೆ.10ರಂದು ಶ್ರೀ ಕ್ಷೇತ್ರ ಕಟೀಲು ಯಕ್ಷಗಾನ ಮಂಡಳಿಯಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಧರ್ಮದರ್ಶಿ ರಮೇಶ್ ಬರ್ಕಜೆಯವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.