ಬಿ.ಎಸ್.ಎನ್.ಎಲ್ ತಾಲೂಕಿನ 23 ನೌಕರರ ಸ್ವಯಂ ನಿವೃತ್ತಿ

ಬೆಳ್ತಂಗಡಿ: ಭಾರತ್ ಸಂಚಾರ್ ನಿಗಮ (ಬಿ.ಎಸ್.ಎನ್.ಎಲ್)ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬೆಳ್ತಂಗಡಿ ತಾಲೂಕಿನ ವಿವಿಧ ದೂರವಾಣಿ ಕೇಂದ್ರದಲ್ಲಿ ವಿವಿಧ ಹುದ್ದೆಗಳಲ್ಲಿದ್ದ 23 ನೌಕರರು ಜ.31 ರಂದು ಸ್ವಯಂ ನಿವೃತ್ತಿ ಹೊಂದಿದ್ದಾರೆ.
ಸ್ವಯಂ ನಿವೃತ್ತರಾದ ಎಸ್‌ಡಿಇ ಅಣ್ಣಿ ಪೂಜಾರಿ, ಸುಂದರ ಎನ್ ಕೆ, ವಿಠಲ ಕುಲಾಲ್, ಪ್ರಸಾದ್ ನಾಯಕ್, ನಾರಾಯಣ ಗೌಡ, ಜಾನಕಿ ಪಿ, ರವೀಂದ್ರ ನಾಯ್ಕ್, ಹಲೋಜಿ ರಾವ್ ವೈ, ಬೊಮ್ಮಣ್ಣ ಗೌಡ ಬಿ, ದೇವಣ್ಣ ಎ, ಗಂಗಾಧರ ಕೆ, ಉಮೇಶ ಗೌಡ ಬಿ, ದಿನಕರ ಗೌಡ ಎಂ, ವಿನಯಚಂದ್ರ ಕೆ, ಸುಂದರ ಅಚಾರ್ಯ , ಡೀಕಯ್ಯ ಗೌಡ, ಡೋಮಿ ಪಿ.ವಿ, ಸುಂದರ ಎ, ಪ್ರದೀಪ್ ಕುಮಾರ್, ಬಾಲಪ್ಪ ಗೌಡ, ದಾಮೋದರ ಗೌಡ ಕೆ, ಮೋಹನ ಗೌಡ ಟಿ, ಪರಮೇಶ್ವರ ಗೌಡ ಸ್ವಯಂ ನಿವೃತ್ತರಾದ ಇವರುಗಳನ್ನು ತಾಲೂಕಿನ ಬಿಎಸ್‌ಎನ್‌ಎಲ್ ಎಲ್ಲಾ ನೌಕರರು ಸೇರಿ ಸಂತೆಕಟ್ಟೆ ಸುವರ್ಣ ಆರ್ಕೇಡ್ ಸಪ್ತಪದಿ ಪಾರ್ಟಿ ಹಾಲ್‌ನಲ್ಲಿ ಸ್ವಯಂ ನಿವೃತ್ತರಾದವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಇದೇ ಸಂದರ್ಭದಲ್ಲಿ ಬೆಳ್ತಂಗಡಿ ದೂರವಾಣಿ ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಮಂಗಳೂರಿಗೆ ವರ್ಗಾವಣೆಗೊಂಡ ಕು| ಸಂಜನಾ ಇವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ದೂರವಾಣಿ ಇಲಾಖೆ ಎ.ಜಿ.ಎಮ್ ಆನಂದ ವಹಿಸಿ, ನಿವೃತ್ತರನ್ನು ಸನ್ಮಾನಿಸಿದರು. ಎಸ್‌ಡಿಇ ಅಣ್ಣಿ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಡಿಇ ಸುಂದರ ಎನ್.ಕೆ ಸ್ವಾಗತಿಸಿ, ವಿನಯಚಂದ್ರ ಉಜಿರೆ ವಂದಿಸಿದರು. ರುಕ್ಮಯ್ಯ ಕನ್ನಾಜೆ ಲಾಯಿಲ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.