ಮಾಚಾರು ಉರೂಸ್‌ಗೆ ಇಂದು ಚಾಲನೆ: ಫೆ. 1 ರಂದು ಸಮಾರೋಪ

Advt_NewsUnder_1
Advt_NewsUnder_1


ಉಜಿರೆ: ಉಜಿರೆ ಗ್ರಾಮದ ಮಾಚಾರು ಮುಹಮ್ಮದ್ ವಲಿಯುಲ್ಲಾಹಿ (ಖ.ಸಿ) ದರ್ಗಾ ಶರೀಫ್ ಮತ್ತು ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಮಾಚಾರು ಇದರ  2020ನೇ ಉರೂಸ್ ಸಂಭ್ರಮಕ್ಕೆ ಜ. 29 ರಂದು(ಇಂದು) ಚಾಲನೆ ದೊರೆತಿದೆ.

ಜ. 29 ರಂದು ಸಾಮೂಹಿಕ ಪ್ರಾರ್ಥನೆ ನಡೆಯಿತು.

ನೇತೃತ್ವವನ್ನು ವಿ.ಹೆಚ್ ಅಬ್ದುಲ್ ಖಾದರ್ ಮದನಿ ಪಳ್ಳಿತ್ತಡ್ಕ ವಹಿಸಿದ್ದರು. ಉದ್ಘಾಟನೆಯನ್ನು ಸಯ್ಯಿದ್ ಹಬೀಬುರ್ರಹ್ಮಾನ್ ಮುಶೈಖ್ ಬಾ ಅಲವಿ ತಂಙಳ್ ಮದನಿ ಬೆಳಾಲು ನೆರವೇರಿಸಿದರು. ಮುಖ್ಯ ಪ್ರಭಾಷಣವನ್ನು ಮಾಚಾರು ಖತೀಬ್ ಬಿ.ಎ ಅಬ್ಬಾಸ್ ಮದನಿ ಉರ್ಲಡ್ಕ ನಡೆಸಿದರು. ಜಮಾಅತ್ ಅಧ್ಯಕ್ಷ ಬಿ.ಎಂ ಇಲ್ಯಾಸ್ ಮಾಚಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಮಾಅತ್ ಬಾಂಧವರು, ಸಮಿತಿ ಪದಾಧಿಕಾರಿಗಳು, ಜಅಫರ್ ಸಅದಿ ಕುಂಡಡ್ಕ ಮೊದಲಾದವರು ಭಾಗಿಯಾಗಿದ್ದರು.

ಜ. 30 ರಂದು ಜಲಾಲಿಯ್ಯ ಮಜ್ಲಿಸ್ ಮತ್ತು ತಾಜುಲ್ ಉಲಮಾ ಅನುಸ್ಮರಣೆ ನಡೆಯಲಿದೆ. ಮಸ್‌ಊದ್ ಸಅದಿ ಜಲಾಲಿಯ್ಯಾ ಆಲಾಪನೆ ನಡೆಸಲಿದ್ದಾರೆ. ಯು. ಕೆ ಇಲ್ಯಾಸ್ ಮದನಿ ಸ್ವಾಗತಿಸಿ, ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು ಅನುಸ್ಮರಣೆ ಪ್ರಭಾಷಣ ನಡೆಸಲಿದ್ದಾರೆ.

ಜ. 31 ರಂದು ಆಧ್ಯಾತ್ಮಿಕ ಮಜ್ಲಿಸ್ ಹಾಗೂ ಮಧ್ಯಾಹ್ನ ಜುಮಾ ನಮಾಝ್ ಬಳಿಕ ಸಾಮೂಹಿಕ ಕೂಟು ಝಿಯಾರತ್ ನಡೆಯಲಿದೆ. ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ, ಸಯ್ಯಿದ್ ತಾಜುಲ್ ಉಲಮಾರ ಸುಪುತ್ರ ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಙಳ್ ನೇತೃತ್ವ ನೀಡಲಿದ್ದಾರೆ. ಸಂಜೆ ಬಿ.ಕೆ ಹಮೀದ್ ಫೈಝಿ ಕಿಲ್ಲೂರು ಅವರಿಂದ ಮುಖ್ಯಪ್ರಭಾಷಣ ನಡೆಯಲಿದೆ.

ಫೆ. 1 ರಂದು ಉರೂಸ್ ಸಮಾರೋಪ:
ಫೆ. 1 ರಂದು ಉರೂಸ್ ಸಮಾರೋಪ ನಡೆಯಲಿದೆ. ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್ ಗುರುವಾಯನಕೆರೆ ದುಆ ಆಶೀರ್ವಚನ ನೀಡಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಬಿ.ಎಂ ಇಲ್ಯಾಸ್ ಮಾಚಾರ್ ವಹಿಸಲಿದ್ದಾರೆ.
ಉಸ್ಮಾನ್ ಜೌಹರಿ ನೆಲ್ಯಾಡಿ ಮುಖ್ಯ ಪ್ರಭಾಷಣ ನಡೆಸಲಿದ್ದು, ಬೆಳಾಲು ತಂಙಳ್, ಎಸ್.ಎಂ ಕೋಯ ತಂಙಳ್, ಅಬ್ಬಾಸ್ ಮದನಿ ಉಜಿರೆ, ಅಬ್ದುರ್ರಹ್ಮಾನ್ ಸಖಾಫಿ ವೇಣೂರು, ಕಾಸಿಂ ಮುಸ್ಲಿಯಾರ್, ಸುಲೈಮಾನ್ ಸಅದಿ, ಆದಂ ಮುಸ್ಲಿಯಾರ್, ಯಾಕೂಬ್ ಗೌಸಿ, ಸಿದ್ದೀಕ್ ಹನೀಫಿ, ಆದಂ, ಹುಸೈನ್, ಅಕ್ಬರಾಲಿ, ಬಿ.ಎ ನಝೀರ್ ಬೆಳ್ತಂಗಡಿ, ಹಂಝ ಬಿಎ, ಅಶ್ರಫ್ ಆಲಿಕುಂಞಿ, ಬಿ.ಎಸ್ ರಫೀಕ್, ಮುಹಮ್ಮದ್ ಇಕ್ಬಾಲ್ ಮಾಸ್ಟರ್, ಅಬ್ದುಸ್ಸಲಾಂ ಮಾಚಾರು, ಸುಲೈಮಾನ್ ಭೀಮಂಡೆ, ಅಬ್ದುರ್ರಹ್ಮಾನ್, ಅಶ್ರಫ್ ಬೆಂಗಳೂರು, ಮುಹಮ್ಮದ್ ಇಕ್ಬಾಲ್ ಮಾಚಾರು ಮೊದಲಾದ ಗಣ್ಯರು ಭಾಗಿಯಾಗಲಿದ್ದಾರೆ.

ಬಳಿಕ ಅನ್ನದಾನ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.