ಬೆಳ್ತಂಗಡಿ ಸ.ಪ್ರ.ದರ್ಜೆ ಕಾಲೇಜು: ಕನಕದಾಸರ ಸಾಹಿತ್ಯ ಪರಂಪರೆ ಮತ್ತು ವರ್ತಮಾನ ರಾಷ್ಟ್ರೀಯ ವಿಚಾರ ಸಂಕೀರಣ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ :ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗ ಸ.ಪ್ರ. ದರ್ಜೆ ಕಾಲೇಜು ಬೆಳ್ತಂಗಡಿ ಇವರ ಸಹಯೋಗದೊಂದಿಗೆ ಕನಕಚಿಂತನ, ಪ್ರಚಾರೋಪನ್ಯಾಸ ಮಾಲಿಕೆಯ 200ರ ಸಂಭ್ರಮ, ಭಕ್ತಿ ಪರಂಪರೆಯ ಲೋಕಯಾನ ಮತ್ತು ಕನಕದಾಸರು ಸಮಕಾಲೀನ ಸಂವಾದ ಕನಕದಾಸರ ಸಾಹಿತ್ಯ ಪರಂಪರೆ ಮತ್ತು ವರ್ತಮಾನ ರಾಷ್ಟ್ರೀಯ ವಿಚಾರ ಸಂಕೀರಣವು ಸ.ಪ್ರ.ದರ್ಜೆ ಕಾಲೇಜು ಸಭಾಂಗಣದಲ್ಲಿ ಜ.೨೮ ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತೀಯ ಭಾಷಾ ಅಧ್ಯಯನಾಂಗ ಕಾಸರಗೋಡು, ಕಣ್ಣೂರು ವಿ.ವಿ, ವಿಶ್ರಾಂತ ನಿರ್ದೇಶಕ ಡಾ.ಪಿ ಶ್ರೀಕೃಷ್ಣ ಭಟ್ ದೀಪ ಬೆಳಗಿಸುವುದರೊಂದಿಗೆ ನೇರವೇರಿಸಿ ಮಾತನಾಡಿ ಕನಕದಾಸರ ಸಾಹಿತ್ಯ, ಪರಂಪರೆ, ಅವರು ನಾಡಿಗೆ ನೀಡಿದ ಕೊಡುಗೆ ಸಾರ್ವಕಾಲಿಕವಾದದ್ದು, ಕನಕದಾಸರ ಹಲವಾರು ಸಾಹಿತ್ಯಗಳು ಬಹಳ ವಿಶೇಷವಾಗಿದೆ ಎಂದರು.
ಅಧ್ಯಕ್ಷತೆಯನ್ನು ಸ.ಪ್ರ.ದ. ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಪಿ ಆಂಟನಿ ವಹಿಸಿದ್ದರು. ಮಂಗಳೂರು ವಿ.ವಿ ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಲೆ ಪ್ರಾಸ್ತಾವಿಕ ಮಾತನಾಡಿದರು.
ವಿದ್ಯಾರ್ಥಿಗಳಾದ ವೀಣಾ, ಸುರಾಕ್ಷಾ ಪ್ರಾರ್ಥನೆ ಹಾಡಿದರು. ಕಾಲೇಜಿನ ಕನ್ನಡ ಸ್ನಾ.ಅ ವಿಭಾಗ ಮುಖ್ಯಸ್ಥ ಡಾ. ಸುಬ್ರಹ್ಮಣ್ಯ ಸ್ವಾಗತಿಸಿ, ವಿದ್ಯಾರ್ಥಿ ದುಗ್ಗಮ್ಮ ನಿರೂಪಿಸಿ, ಉಪನ್ಯಾಸಕಿ ಶ್ರೀಲತಾ ಉದ್ಘಾಟಕರ ಪರಿಚಯ ವಾಚಿಸಿ, ಕನಕದಾಸ ಸಂಶೋಧನ ಕೇಂದ್ರದ ಆನಂದ ಎಂ.ಕಿದೂರು ವಂದಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.