ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಧ್ವರೋಹಣ ಜಾತ್ರಾ ಮಹೋತ್ಸವ

ನ್ಯಾಯತರ್ಪು : ಇಲ್ಲಿಯ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೆಯ 5 ನೇ ದಿನ.ಜ.28 ರಂದು ಪೂರ್ವಾಹ್ನ ಸುಲಗ್ನದಲ್ಲಿ ಕವಾಟೋದ್ಘಾಟನೆ,ದಿವ್ಯ ದರ್ಶನ, ಮಹಾಪೂಜೆ,ಚೂರ್ಣೋತ್ಸವ ಬಲಿ,ವಿಶೇಷ ಸೇವೆಗಳು ಜರುಗಿತು.ಈ ಸಂದರ್ಭ ಕ್ಷೇತ್ರದಲ್ಲಿ ತುಲಾ ಭಾರ ಸೇವೆ,ಹರಕೆ ರೂಪದಲ್ಲಿ ಜಾನುವಾರುಗಳನ್ನು ಕೊಡಿಮರ ಕಟ್ಟಿ ಒಪ್ಪಿಸುವುದು ಹಾಗೂ ಅನ್ನ ಸಂತರ್ಪಣೆ ನಡೆಯಿತು.
ರಾತ್ರಿ ದೇವರ ಬಲಿ ಹೊರಟು ಬಾಕಿಮಾರು ಗದ್ದೆಯಲ್ಲಿ ಪಿಲಿಚಾಮುಂಡಿ ದೈವದ ಭೇಟಿ ಮತ್ತು ಗಗ್ಗರ ಸೇವೆ,ಅವಭೃತ ಸ್ನಾನ,ಧ್ವಜ ಅವರೋಹಣ ಮತ್ತು ಮಹಾ ಪೂಜೆ ನಡೆಯಲಿದೆ. ರಾತ್ರಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸಂಘದ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ ಹಾಗೂ ಬಲೇ ತೆಲಿಪಾಲೆ ಖ್ಯಾತಿಯ ಉಮೇಶ್ ಮಿಜಾರ್ ತಂಡದವರಿಂದ ತೆಲಿಕೆದಗೊಂಚಿಲ್ ಕಾರ್ಯಕ್ರಮ ಸಭಾ ವೇದಿಕೆಯಲ್ಲಿ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.