ಬಾಲಪುರಸ್ಕಾರ ಪುರಸ್ಕೃತೆ ಸುನೀತಾ ಪ್ರಭುಗೆ ನಾಳೆ ಬೆಳ್ತಂಗಡಿಯಲ್ಲಿ 1500 ವಿದ್ಯಾರ್ಥಿಗಳಿಂದಲೇ ಭವ್ಯ ಸ್ವಾಗತ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1


ಬೆಳ್ತಂಗಡಿಃ ಕೇಂದ್ರಸರಕಾರ ಕೊಡಮಾಡುವ ಪ್ರತಿಷ್ಠಿತ ಪ್ರಧಾನಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿ ಪುರಸ್ಕೃತರಾಗಿ ಜ.೨೮ ರಂದು  ವಿಮಾಣದ ಮೂಲಕ ಮಂಗಳೂರಿಗೆ ಮರಳಿ ಸ್ವಗ್ರಾಮ ಬೆಳ್ತಂಗಡಿಗೆ ಆಗಮಿಸುತ್ತಿರುವ ಸುನೀತಾ ಪ್ರಭು ಮೂರ್ಜೆ ಅವರನ್ನು 1500 ರಷ್ಟು ವಿದ್ಯಾರ್ಥಿಗಳೇ ಬೆಳ್ತಂಗಡಿಗೆ ಆಕೆಯನ್ನು ಭವ್ಯವಾಗಿ ಸ್ವಾಗತಿಸಿ ಅಭಿನಂದಿಸುವ ಕಾರ್ಯಕ್ರಮ ಏರ್ಪಾಟು ಮಾಡಿದ್ದಾರೆ.

ಈ ಸಂಬಂಧ ನಗರದ ವರ್ತಾಭವನದಲ್ಲಿ ಬೆಳ್ತಂಗಡಿ ತಾಲೂಕು ವಿದ್ಯಾರ್ಥಿ ಅಭಿನಂದನಾ ಸಮಿತಿ ವತಿಯಿಂದ ವಿದ್ಯಾರ್ಥಿಗಳೇ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ವಿವಿರ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಾಣಿ ಶಾಲೆಯ ನಿಕ್ಷೇಪ್ ಎನ್, ಬೆಳ್ತಂಗಡಿ ಸರಕಾರಿ ಪ್ರೌಢ ಶಾಲೆಯ ಭುವಿತ್, ಉಜಿರೆ ಎಸ್‌ಡಿಎಂ ಸಿಬಿಎಸ್‌ಇ ಶಾಲೆಯ ಶರಧಿ ಬಿ.ಎಸ್, ಬೆಳ್ತಂಗಡಿ ಎಸ್‌ಡಿಎಂ ಶಾಲೆಯ ಸಮ್ಮೇಧ್ ಎಸ್ ಜೈನ್, ಸೈಂಟ್ ಮೇರಿಸ್ ಶಾಲೆಯ ಚರಣ್ ಹೊಳ್ಳ, ಹೋಲಿ ರಿಡೀಮರ್ ಶಾಲೆಯ ರಿತೇಶ್ ಎಚ್ ದೇವಾಡಿಗ ಇವರು ಮಾಹಿತಿ ನೀಡಿದರು.

1500 ವಿದ್ಯಾರ್ಥಿಗಳು ಭಾಗಿ:
ತಾಲೂಕಿನ ಸಮಸ್ತ ವಿದ್ಯಾರ್ಥಿ ಸಮೂಹದ ಪರವಾಗಿ ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ಗುರುವಾಯನಕೆರೆ ಪ್ರೌಢ ಶಾಲೆ, ಉಜಿರೆ ಎಸ್‌ಡಿಎಂ ಸಿಬಿಎಸ್‌ಇ ಶಾಲೆ ಸೇರಿದಂತೆ ನಗರದ ಆಸುಪಾಸಿನ 8 ಶಾಲೆಯ 1500 ರಷ್ಟು ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ನಗರದಲ್ಲಿ ಮೆರವಣಿಗೆ ಬಳಿಕ ಮಿನಿ ವಿಧಾನ ಸೌಧದ ಬಳಿ ಮಕ್ಕಳ ಸಮಿತಿಯಿಂದಲೇ ಆಕೆಗೆ ಅಭಿನಂದೆ ಸಲ್ಲಿಕೆಯಾಗಲಿದೆ. ಈ ಸಮಾರಂಭದಲ್ಲಿ ಸಾರ್ವಜನಿಕರಿಗೂ ಅಭಿನಂದನೆ ಸಲ್ಲಿಕೆಗೆ ಅವಕಾಶ ಇದೆ ಎಂದರು.

ವಿಮಾನ ನಿಲ್ದಾಣದಲ್ಲಿ ಶಾಸಕ ವೇದವ್ಯಾಸ ಕಾಮತ್‌ರಿಂದ ಸ್ವಾಗತ:
ಮಂಗಳವಾರ ಮಧ್ಯಾಹ್ನ ದೆಹಲಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಸುನೀತಾ ಪ್ರಭು, ಅವರನ್ನು ಜಿಲ್ಲಾಡಳಿತ ಸ್ವಾಗತಿಸಲಿದೆ. ಶಾಸಕ ವೇದವ್ಯಾಸ ಕಾಮತ್ ಬರಮಾಡಿಕೊಂಡ ಬಳಿಕ ಅವರು ಅಪರಾಹ್ನ 3 ಗಂಟೆಗೆ ಬೆಳ್ತಂಗಡಿಯ ಎಸ್‌ಡಿಎಂ ಕಲಾಭವನಕ್ಕೆ ಬರಲಿದ್ದಾರೆ. ಅಲ್ಲಿಂದ ಆಕೆಯನ್ನು ತುಳುನಾಡ ಶೈಲಿಯ ವಸ್ತ್ರ ಧರಿಸಿ ತೆರೆದ ವಾಹನದಲ್ಲಿ ಬೆಳ್ತಂಗಡಿ ಸಂತೆಕಟ್ಟೆ ಅಯ್ಯಪ್ಪ ಗುಡಿಯಿಂದ ಬಸ್ಟ್ಯಾಂಡ್ ಮೂಲಕ ತಾಲೂಕು ಮಿನಿವಿಧಾನ ಸೌಧದವರೆಗೆ ಅದ್ದೂರಿ ಮೆರವಣಿಗೆಯಲ್ಲಿ ಕರೆತರಲಾಗುವುದು. ಎರಡು ಶಾಲೆಗಳ ವಿಷೇಶ ಬ್ಯಾಂಡ್‌ಸೆಟ್, ರಾಷ್ಟ್ರ ಧ್ವಜ ಹಿಡಿದುಕೊಂಡಿರುವ ಸಾವಿರಾರು ವಿದ್ಯಾರ್ಥಿಗಳು ಅಭಿನಂದನಾಪೂರ್ವಕವಾಗಿ ಎದುರುಗೊಳ್ಳಲಿದ್ದಾರೆ. ನಂತರ ವೇದಿಕೆಯಲ್ಲಿ ಅಭಿನಂದನಾ ಸಭೆ ನಡೆಯಲಿದೆ.

ಶಾಸಕರು, ತಹಶಿಲ್ದಾರ್, ಎಸಿ, ನ್ಯಾಯಾಧೀಶರು ಭಾಗಿ:
ಮಕ್ಕಳೇ ವೇದಿಕೆಯಲ್ಲಿದ್ದು ನಡೆಯುವ ಈ ಅಭಿನಂದನಾ ಸಮಾರಂಭದಲ್ಲಿ ಜನತೆಯ ಪರವಾಗಿ ಶಾಸಕ ಹರೀಶ್ ಪೂಂಜ ಸುನೀತಾ ಪ್ರಭು ಅವರನ್ನು ಅಭಿನಂದಿಸಲಿದ್ದಾರೆ.  ತಹಶಿಲ್ದಾರ್ ಗಣಪತಿ ಶಾಸ್ತ್ರೀ, ಎಸಿ ಡಾ. ಯತೀಶ್ ಉಳ್ಳಾಲ್, ಬೆಳ್ತಂಗಡಿ ನ್ಯಾಯಾಧೀಶರು ಸಹಿತ ಪ್ರಮುಖರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಸುನೀತಾ ಪ್ರಭು ಸಾಧನೆಯ ಹಿನ್ನೋಟ:
ವಿಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ನಡೆಸಿದ ಅಮೋಘ ಸಾಧನೆಗಾಗಿ ಬೆಳ್ತಂಗಡಿ ಮೂಲದ ಮೂರ್ಜೆ ಸುನೀತಾ ಪ್ರಭು ಅವರು ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವಾಲಯದಿಂದ ಕೊಡಮಾಡುವ ಪ್ರಧಾನಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈಗಾಗಲೇ ಅವರು ಜ.22 ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ದೇಶದ ಘನತೆವೆತ್ತ ರಾಷ್ಟ್ರಪತಿಗಳಾದ ರಮಾನಾಥ್ ಕೊವಿಂದ್ ಅವರಿಂದ ಪುರಸ್ಕಾರ ಸ್ವೀಕರಿಸಿದ್ದಾರೆ. ಜೊತೆಗೆ ಜ. 26 ಗಣರಾಜ್ಯೋತ್ಸವ ಪರೆಡ್‌ನಲ್ಲೂ ಭಾಗಿಯಾಗಿ ರಾಷ್ಟ್ರನಾಯಕರನ್ನು ಭೇಟಿ ಮಾಡುವ ಅವಕಾಶ ಪಡೆದಿದ್ದಾರೆ.
ವಿಜ್ಞಾನ ಕ್ಷೇತ್ರದಲ್ಲಿ ವಿಶ್ವದಾದ್ಯಂತ ಗಮನ ಸೆಳೆದ ಬಾಲ ಪ್ರತಿಭೆಯಾಗಿ ಮೂಡಿ ಬಂದಿದ್ದಾರೆ. ಬೆಳ್ತಂಗಡಿಯ ಉದ್ಯಮಿ ವಿವೇಕಾನಂದ ಪ್ರಭು ಮತ್ತು ಶಾಂತಲಾ ಪ್ರಭು ದಂಪತಿಯ ಪುತ್ರಿಯಾಗಿರುವ ಸುನೀತಾ ಪ್ರಭು ಪ್ರಸಕ್ತ ಮಂಗಳೂರಿನ ಸಿ.ಎಫ್.ಏ.ಎಲ್ ವಿದ್ಯಾ ಸಂಸ್ಥೆಯಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಈಕೆ ತನ್ನ ಪ್ರಾಥಮಿಕ ಶಿಕ್ಷಣವನ್ನು ಉಜಿರೆ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯ (ಸಿಬಿಯಸ್‌ಸಿ) ಯಲ್ಲಿ ಪೂರೈಸಿದ್ದಾರೆ.
ಸೊಳ್ಳೆ ನಿವಾರಕ ಪರದೆ ಅನ್ವೇಷಣೆ:
ಸುನೀತಾ ಪ್ರಭು ಅವರು ಈಗಾಗಲೇ ಡೆಂಗ್ಯೂ ಮತ್ತು ಇತರ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಸೊಳ್ಳೆ ನಿವಾರಕ ಪರದೆಯನ್ನು ಅನ್ವೇಷಿಸಿದ್ದಾರೆ. ಈ ಸಾಧನವನ್ನು ಪುಣೆಯ ಐ.ಐ.ಎಸ್.ಇ.ಆರ್. ಮತ್ತು ಎನ್.ಸಿ.ಎಲ್. ಸಂಸ್ಥೇ ಪರೀಕ್ಷಿಸಿ ಅಭಿವೃದ್ದಿಪಡಿಸಿದೆ. ಅತ್ಯಂತ ಕಡಿಮೆ ವೆಚ್ಚದ ಈ ಸಾಧನ ಆರೋಗ್ಯ ರಕ್ಷಣೆಯಲ್ಲಿ ಮಹತ್ತರ ಪಾತ್ರವಹಿಸಿದೆ. ಇದೇ ಪ್ರಾಜೆಕ್ಟ್ 2018 ರಲ್ಲಿ ದೆಹಲಿಯಲ್ಲಿ ನಡೆದ ಐ.ಆರ್.ಐ.ಎಸ್. ರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ರಾಷ್ಟ್ರೀಯ ಗ್ರ್ಯಾಂಡ್ ಪ್ರಶಸ್ತಿ ಗಳಿಸಿದೆ.2019  ರಲ್ಲಿ ಫಿನೀಕ್ಸ್ (ಅಮೇರಿಕಾದಲ್ಲಿ) ನಡೆದ  80ನೇ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳದಲ್ಲಿ ಭಾರತವನ್ನು ಪ್ರತಿನಿಧಿಸಿದ ಹಿನ್ನೆಲೆಯಲ್ಲಿ ಈ ಬಾಲ ಪುರಸ್ಕಾರ ಅವರನ್ನು ಅರಸಿ ಬಂದಿದೆ.

ಮಹಾರಾಷ್ಟ್ರದಲ್ಲಿ ಪ್ರಾಜೆಕ್ಟ್ ಮಂಡಿಸಿದ ಕುವರಿ:
ಸುನೀತಾ ಪ್ರಭು ಅವರು ಈ ಹಿಂದೆ ಈಕೆ ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೇಸ್ಸಿನಲ್ಲಿ ಭಾಗವಹಿಸಿ ವಿಜ್ಞಾನ, ತಂತ್ರಜ್ಞಾನ ಮತ್ತು ಸುಸ್ಥಿರ ಅಭಿವೃದ್ಧಿ ಆವಿಷ್ಕಾರದ ಮೇಲೆ ಪ್ರಾಜೆಕ್ಟ್ ಮಂಡಿಸಿದ್ದಾರೆ. ಇದಲ್ಲದೆ ಇವರ ಸಂಶೋಧನೆಯ ರಿಮೋಟ್ ಕಂಟ್ರೋಲ್ ರಬ್ಬರ್ ಟ್ಯಾಪಿಂಗ್ ಯಂತ್ರವು ವ್ಯಾಪಕ ಶ್ಲಾಘನೆಗೆ ಒಳಗಾಗಿದೆ. ಅಲ್ಲದೆ ಈಕೆ ಬೆಂಗಳೂರಿನ ಶಿಕ್ಷಕರ ಭವನದಲ್ಲಿ ನಡೆದ ರಾಷ್ಟ್ರ ಮಟ್ಟದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸ್ಪರ್ಧೆಯಲ್ಲೂ ಭಾಗವಹಿಸಿ ಪ್ರಾಜೆಕ್ಟ್ ಮಂಡಿಸಿದ್ದಾರೆ.

**ಅಚ್ಚು, ಮುಂಡಾಜೆ**

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.