ಗ್ರಾಮಾಂತರ ಪ್ರದೇಶಗಳಲ್ಲಿ ರಬ್ಬರ್ ಉತ್ಪಾದಕರ ಸೊಸೈಟಿ ರೈತರ ಹಾಗೂ ಜನರ ಸೇವೆ ಮಾಡುವುದು ಶ್ಲಾಘನೀಯ ಯು.ಬಾಲಕೃಷ್ಣ

ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘ (ನಿ) ಉಜಿರೆ ಹಾಗೂ ನಿಡ್ಲೆ ರಬ್ಬರ್ ಉತ್ಪಾದಕರ ಸಂಘ ಇದರ ಸಹಯೋಗದಲ್ಲಿ ರಬ್ಬರ್ ಖರೀದಿ ಕೇಂದ್ರದ ಉದ್ಘಾಟನಾ ಸಮಾರಂಭ ಹಾಗೂ ರಬ್ಬರ್ ಟ್ಯಪಿಂಗ್ ತರಬೇತಿಯ ಉದ್ಘಾಟನೆ ನಡೆಯಿತು.

ಟ್ಯಾಪಿಂಗ್ ಮಾಡದೆ ಇರುವ ರಬ್ಬರ್ ಮರಗಳನ್ನುಟ್ಯಾಪಿಂಗ್ ಮಾಡಲು ಊರಿನ ಜನರಿಗೆ ತರಬೇತಿ ನೀಡಿ ಟ್ಯಾಪಿಂಗ್ ಮಾಡಿಸುವ ಮಾಲಕ ಉತ್ಪಾದನೆ ಹೆಚ್ಚಿಸಬಹುದು ಹಾಗೂ ಗ್ರಾಮಾಂತರ ಪ್ರದೇಶದಲ್ಲಿಯೇ ರಬ್ಬರ್ ಖರೀದಿ ಮಾಡುವುದು ಹಾಗೂ ಕೃಷಿ ಪರಿಕರಗಳು ದೊರೆಯುವಂತಾದರೆ ರೈತರಿಗೆ ತುಂಬಾ ಅನುಕೂಲವಾಗುತ್ತದೆ. ಆ ನಿಟ್ಟಿನಲ್ಲಿ ನಿಡ್ಲೆ ರಬ್ಬರ್ ಉತ್ಪಾದಕರ ಸಂಘ ಕೆಲಸ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ರಬ್ಬರ್ ಪ್ರೊಡಕ್ಸನ್ ಕಮಿಷನರ್ ಯು.ಬಾಲಕೃಷ್ಣ ರವರು ಹೇಳಿದರು

ನಿಡ್ಲೆ ಪ್ರದೇಶದ ರಬ್ಬರ್ ರೈತರಿಗೆ ಉಜಿರೆ ರಬ್ಬರ್ ಸಹಕಾರಿ ಸಂಘದಲ್ಲಿ ದೊರೆಯುವ ದರ ನಿಡ್ಲೆಯಲ್ಲಿಯೇ ದೊರೆಯಲಿದೆ ಹಾಗೂ ಎಲ್ಲ ಕೃಷಿ ಪರಿಕರಗಳನ್ನು ಒದಗಿಸುವ ಮೂಲಕ ಸಂಘವು ರೈತರಿಗೆ ಸಹಾಯ ಮಾಡಲಿದೆ ಎಂದು ಬೆಳ್ತಂಗಡಿ ರಬ್ಬರ್ ಬೆಳೆಗಾರರ ಮಾರಾಟ ಹಾಗೂ ಸಂಸ್ಕರಣಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಾಜು ಶೆಟ್ಟಿ ಹೇಳಿದರು

ಸಹಕಾರಿ ದುರೀಣ ಎಸ್. ಎಮ್ ಹರಿದಾಸ್ ಮಾತನಾಡಿ ಗ್ರಾಮದ ಜನರೂ ಸಹಕಾರಿ ಚಳುವಳಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಉದ್ಯೋಗದ ಅವಕಾಶಗಳು ಹೆಚ್ಚಾಗುವ ಮೂಲಕ ಗ್ರಾಮದ ಅಬಿವೃದ್ದಿ ಸಾದ್ಯ ಎಂದರು

ಸಭೆಯಲ್ಲಿ ಉಜಿರೆ ರಬ್ಬರ್ ಸೊಸೈಟಿಯ ಆಡಳಿತ ಮಂಡಳಿ ನಿರ್ದೇಶಕರಾದ ಪದ್ಮ ಗೌಡಾ,ಅನಂತ ಭಟ್ಟ್,ಜಯಶ್ರೀಡಿ.ಎಮ್,ವಿ.ವಿ.ಅಬ್ರಹಾಂ,ಬಿ.ಎಸ್. ಅಬ್ರಹಾಂ ,ರಬ್ಬರ್ ಮಂಡಳಿಯ ಪೀಲ್ಡ್ ಅಫಿಸರ್ ಅನಿಲ್ ಕುಮಾರ್, ಹಿರಿಯ ಸಹಕಾರಿ ಸತ್ಯನಾರಾಯಣ ರಾವ್,ಸಂಘದ ಪದಾದಿಕಾರಿಗಳಾದ ವೆಂಕಟೇಶ್ ಮಯ್ಯ,ಪದ್ಮನಾಭ ಗೌಡಾ,ಮನೋಹರ್ ಮುಂತಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.