ಮುಂಡಾಜೆ ಶಾಲೆಯಲ್ಲಿ ಬುಲ್ ಬುಲ್ , ಗೈಡ್ ಘಟಕ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

ಮುಂಡಾಜೆ: ಶತಮಾನೋತ್ಸವ ಅಂಚಿನಲ್ಲಿರುವ ಮುಂಡಾಜೆ ಉನ್ನತೀಕರಿಸಿದ ಹಿ. ಪ್ರಾ ಶಾಲೆಯಲ್ಲಿ ಇಂದು ಗಣರಾಜ್ಯೋತ್ಸವ ಆಚರಣೆ ಮತ್ತು ನೂತನವಾಗಿ ಬುಲ್ ಬುಲ್ ಮತ್ತು ಗೈಡ್ಸ್ ಘಟಕ ಉದ್ಘಾಟನೆ ನಡೆಯಿತು.

ಎಸ್ ಡಿ ಎಂಸಿ ಅಧ್ಯಕ್ಷ ಗಣೇಶ್ ಬಂಗೇರ ಧ್ವಜಾರೋಹಣ ನಡೆಸಿ ಬಳಿಕ ಘಟಕವನ್ನು ದೀಪಬೆಳಗಿ ಉದ್ಘಾಟನೆ ಗೊಳಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ನಿವೃತ ಶಿಕ್ಷಕ ಸಂಜೀವ ಮಾಸ್ಟರ್ ಸ್ಮರಣಾರ್ಥ ಮಕ್ಕಳಿಗೆ ಸಿಹಿತಿಂಡಿ ಒದಗಿಸಿದ ಕಿಶೋರ್ ಕುಮಾರ್ ಕುರುಡ್ಯ, ಹಳೆವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಅಶ್ರಫ್ ಆಲಿಕುಂಞಿ ಶುಭಕೋರಿದರು.
ಮುಖ್ಯೋಪಾಧ್ಯಾಯಿನಿ ಸುಮಂಗಲಾ, ಪೋಷಕರ ಪರವಾಗಿ ಸುಂದರ ಉಪಸ್ಥಿತರಿದ್ದರು.

ಮುಂಡಾಜೆ ವಿವೇಕಾನಂದ ವಿದ್ಯಾ ಸಂಸ್ಥೆಯ ಉಪನ್ಯಾಕರು ಮತ್ತು ರೋವರ್ ರೇಂಜರ್ ಘಟಕ ಮುಖ್ಯಸ್ತರುಗಳಾದ ನಮಿತಾ ಮತ್ತು ಕೃಷ್ಣ ಕಿರಣ್ ಸಂಪನ್ಮೂಲ ವ್ಯಕ್ತಿಯಾಗಿದ್ದರು.

ದೈಹಿಕ ಶಿಕ್ಷಣ ಶಿಕ್ಷಕ ದೇವಸ್ಯ ವಿದ್ಯಾರ್ಥಿಗಳ ಚಟುವಟಿಕೆ ನಡೆಸಿಕೊಟ್ಟರು. ಶಿಕ್ಷಕಿ ಸುನಂದ ನಿರೂಪಿಸಿ, ಜಯಶ್ರೀ ವಂದಿಸಿದರು, ಪವಿತ್ರಾ ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.